ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಬಯಸುವ ಕೃಷಿ ಆಸಕ್ತರ ಬಯಕೆಯನ್ನು ಈಡೇರಿಸಲು ಎಂಟು ತೋಟಗಾರಿಕೆ ಕ್ಷೇತ್ರದ ನರ್ಸರಿಗಳಲ್ಲಿ 3,08,400 ವಿವಿಧ ಬೆಳೆಗಳ ವಿವಿಧ ತಳಿಗಳ ಸಸಿಗಳು ಸಿದ್ಧವಾಗಿವೆ.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ 39,050 ಅಡಿಕೆ ಸಸಿಗಳು, 1,51,300 ಕಾಳುಮೆಣಸು, 92,900 ಗೇರು, 8,800 ಕೊಕ್ಕೋ, 1,000 ಮಲ್ಲಿಗೆ, 2,700 ಮಾವು, 1,950 ತೆಂಗು, 2,000 ನುಗ್ಗೆ , 1,900 ಪಪ್ಪಾಯ, 6,800 ಕಸಿ ಕಾಳುಮೆಣಸು, ಸಸಿಗಳು ಬೆಳಸಲಾಗಿದೆ. ಅಡಿಕೆಯಲ್ಲಿ ಮಂಗಳಾ, ಸ್ಥಳೀಯ, ಇಂಟರ್ ಮಂಗಳಾ, ಮೋಹಿತ್ ನಗರ, ಮಾವಿನಲ್ಲಿ ಮಲ್ಲಿಕಾ, ಬಾದಾಮಿ , ಗೇರುವಿನಲ್ಲಿ ಉಳ್ಳಾಲ-1,3, ವಿ-4, ಭಾಸ್ಕರ, ಕಾಳು ಮೆಣಸಿನಲ್ಲಿ ಕಸಿ, ಪಣಿಯೂರು, ಕೊಕ್ಕೋದಲ್ಲಿ ಎಫ್ ಹೈಬ್ರಿಡ್, ಮಲ್ಲಿಗೆಯಲ್ಲಿ ಉಡುಪಿ ಮಲ್ಲಿಗೆ, ಪಪ್ಪಾಯದಲ್ಲಿ ತೈವನ್ ರೆಡ್‌ಲೇಡಿ ಸಹಿತ ವಿವಿಧ ಜಾತಿಗಳ ಗಿಡಗಳಲ್ಲಿ ವಿವಿಧ ತಳಿಗಳನ್ನು ರೈತರಿಗೆ ತೋಟಗಾರಿಕೆ ಇಲಾಖೆ ದರದಂತೆ ನೀಡಲಾಗುತ್ತಿದೆ.
ಗಿಡಗಳು ಲಭ್ಯವಿರುವ ಸ್ಥಳಗಳು :
ಮಂಗಳೂರಿನ ಪಡೀಲ್ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, 5,000., ಕೊಕ್ಕೋ 3,000, ಉಡುಪಿ ಮಲ್ಲಿಗೆ 1,000, ದ್ವಿಕಾಂಡ ಕಾಳುಮೆಣಸು 6, 000 ಸಸಿಗಳು ಲಭ್ಯವಿವೆ. ಪುತ್ತೂರಿನ ಕಬಕ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು 6,000, ಕಾಳು ಮೆಣಸು 10,200, ಅಡಿಕೆ 5,200, ನುಗ್ಗೆ, 1,000, ಸುಳ್ಯದ ಹೊಸಗದ್ದೆ ತೋಟಗಾರಿಕೆ ಕ್ಷೇತ್ರದಲ್ಲಿ ಕಾಳು ಮೆಣಸು 52,000, ಮಾವು 450, ಕಸಿ ಕಾಳುಮೆಣಸು 2, 000, ತೆಂಗು 980, ಗೇರು 15,800, ಬೆಳ್ತಂಗಡಿಯ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ 9,850, ಗೇರು 59,000,ಕಾಳುಮೆಣಸು ಪಣಿಯೂರು 40,700, ಕಸಿ ಕಾಳುಮೆಣಸು 4,600, ಕೊಕ್ಕೋ 1,800, ತೆಂಗು 970, ಮಾವು 1,500, ಪಪ್ಪಾಯ 1,900 ,ಬೆಳ್ತಂಗಡಿ ಕಚೇರಿ ನರ್ಸರಿಯಲ್ಲಿ ಕಾಳು ಮೆಣಸು 10,000, ಅಡಿಕೆ 5,000, ಚಾರ್ಮಾಡಿ ತೋಟಗಾರಿಕೆ ಕ್ಷೇತ್ರದಲ್ಲಿ ಕಾಳು ಮೆಣಸು 5,000, ವಿಟ್ಲ ತೋಟಗಾರಿಕೆ ಕ್ಷೇತ್ರದಲ್ಲಿ ಮಾವು 750, ಕಾಳುಮೆಣಸು 15,000, ಅಡಿಕೆ 5,000, ನುಗ್ಗೆ 1,000 ಹಾಗೂ ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು 9,100, ಕೋಕ್ಕೊ 2,000, ಕಾಳು ಮೆಣಸು 12,600, ಅಡಿಕೆ 10,000 ಸಹಿತ ಒಟ್ಟು 3,06,400 ವಿವಿಧ ಜಾತಿಯ ತಳಿಗಳು ಸಿದ್ಧವಾಗಿವೆ.
ದಕ್ಷಿಣ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ರೈತರ ಬೇಡಿಕೆಗಳನ್ನು ಪೂರೈಸಲು ಈಗಾಗಲೇ ಅಡಿಕೆ, ತೆಂಗು, ಕಾಳುಮೆಣಸು ಸಹಿತ ವಿವಿಧ ಬೆಳೆಗಳ ವಿವಿಧ ತಳಿಗಳನ್ನು ಬೆಳೆಸಲಾಗಿದೆ. ರೈತರು ತಮ್ಮ ಆವಶ್ಯಕತೆಗಳಿಗೆ ಅನುಗುಣವಾಗಿ ಇಲಾಖೆ ನಿಗದಿಪಡಿಸಿದ ರಿಯಾಯತಿ ದರದಲ್ಲಿ ಇವುಗಳನ್ನು ಪಡೆದುಕೊಳ್ಳಬಹುದಾಗಿದೆ.
-ಜಾನಕಿ, ತೋಟಗಾರಿಕೆ ಇಲಾಖಾ ಹಿರಿಯ ಸಹಾಯಕ ನಿರ್ದೇಶಕರು