Advertisement
4 ವಿಕೆಟಿಗೆ 88 ರನ್ನುಗಳಿಂದ ಎರಡನೇ ದಿನದಾಟ ಆರಂಭಿಸಿದ ಶ್ರೀಲಂಕಾ 94 ರನ್‌ವರೆಗೆ ಆರಾಮವಾಗಿ ಸಾಗಿತ್ತು. ಈ ಹಂತದಲ್ಲಿ ದಾಳಿಗಿಳಿದ ಬೌಲ್ಟ್ ಶ್ರೀಲಂಕಾದ ಮೇಲೆ ನಿರಂತರ ಪ್ರಹಾರವಿಕ್ಕಿದರು. ಕೇವಲ 15 ಎಸೆತಗಳ ಅಂತರದಲ್ಲಿ 4 ರನ್ನಿಗೆ ಆರು ವಿಕೆಟ್ ಕೀಳುವ ಮೂಲಕ ಶ್ರೀಲಂಕಾದ ಇನ್ನಿಂಗ್ಸ್ ಮುಗಿಸಿದರು. ಶ್ರೀಲಂಕಾ 104 ರನ್ನಿಗೆ ಆಲೌಟಾದ ಕಾರಣ ನ್ಯೂಜಿಲ್ಯಾಂಡ್ ಸರಣಿ ನಿರ್ಣಾಯಕ ಈ ಟೆಸ್ಟ್‌ನಲ್ಲಿ 74 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಅಂತಿಮವಾಗಿ ಬೌಲ್ಟ್ 30 ರನ್ನಿಗೆ 6 ವಿಕೆಟ್ ಕಿತ್ತರು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕ ಆಟಗಾರರಿಬ್ಬರ ಅರ್ಧಶತಕದಿಂದಾಗಿ ನ್ಯೂಜಿಲ್ಯಾಂಡ್ ದ್ವಿತೀಯ ದಿನದಾಟದ ಅಂತ್ಯಕ್ಕೆ ಕೇವಲ ಎರಡು ವಿಕೆಟಿಗೆ 231 ರನ್ ಗಳಿಸಿದೆ. ಒಟ್ಟಾರೆ 305 ಮುನ್ನಡೆ ಸಾಧಿಸಿರುವ ಆತಿಥೇಯ ತಂಡ ಬೃಹತ್ ಅಂತರದ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನಿಂಗ್ಸ್ ಆರಂಭಿಸಿದ ಜಿತ್ ರಾವಲ್ ಮತ್ತು ಟಾಮ್ ಲಾಥಮ್ ಮೊದಲ ವಿಕೆಟಿಗೆ 121 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. 74 ರನ್ ಗಳಿಸಿದ ರಾವಲ್ ಔಟಾಗಿದ್ದರೆ ಲಾಥಮ್ ಅಷ್ಟೇ ರನ್ ಗಳಿಸಿ ಆಡುತ್ತಿದ್ದಾರೆ. ಅವರು ಮೂರನೇ ದಿನ ಶತಕ ದಾಖಲಿಸುವ ವಿಶ್ವಾಸದಲ್ಲಿದ್ದಾರೆ. ಆಬಳಿಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟಯ್ಲರ್ ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು. ದಿನದಾಟ ನಿಂತಾಗ ಲಾಥಮ್ ಮತ್ತು ಟಯ್ಲರ್ ಔಟಾಗದೇ ಉಳಿದಿದ್ದಾರೆ.
Related Articles
Advertisement