Advertisement
ಭಾರತಕ್ಕೆ ಗಾಯದ ಮೇಲೆ ಬರೆಈಗಾಗಲೇ ಮೊದಲ ಪಂದ್ಯವನ್ನು ಸೋತು ಸಂಕಷ್ಟದಲ್ಲಿರುವ ಟೀಮ್ ಇಂಡಿಯಾಕ್ಕೆ ಉತ್ತಮ ಫಾರ್ಮ್ನಲ್ಲಿದ್ದ ಇಶಾಂತ್ ಶರ್ಮ ಗಾಯದ ಸಮಸ್ಯೆಗೆ ಒಳಗಾಗಿರುವುದು ದೊಡ್ಡ ಹೊಡೆತವಾಗಿದೆ. ಅವರು ದ್ವಿತೀಯ ಟೆಸ್ಟ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಶಾಂತ್ ಶುಕ್ರವಾರ ನೆಟ್ ಅಭ್ಯಾಸದಲ್ಲಿ ಬೌಲಿಂಗ್ ನಡೆಸಲಿಲ್ಲ. ಕಳೆದ ತಿಂಗಳು ರಣಜಿ ಟ್ರೋಫಿ ಪಂದ್ಯದ ವೇಳೆ ಇಶಾಂತ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈಗ ಮತ್ತದೇ ಸಮಸ್ಯೆ ಅವರನ್ನು ಕಾಡಿದೆ.
ಕಿವೀಸ್ ಪ್ರವಾಸದಲ್ಲಿ ನಾಯಕ ವಿರಾಟ್ ಕೊಹ್ಲಿ ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಟಿ20, ಏಕದಿನದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಕೊಹ್ಲಿ ಎಡವಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಅವರು ಗಳಿಸಿದ್ದು 21 ರನ್ ಮಾತ್ರ. ಕೊಹ್ಲಿ ಮಾತ್ರವಲ್ಲದೆ ಅನುಭವಿಗಳಾದ ಚೇತೇಶ್ವರ್ ಪೂಜಾರ, ವಿಹಾರಿ ಕೂಡ ಬ್ಯಾಟಿಂಗ್ ಬರ ಎದುರಿಸುತ್ತಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಕೊಂಚ ಮಟ್ಟಿಗೆ ಅಡ್ಡಿಯಿಲ್ಲ ಒಂದು ಅರ್ಧಶತಕ ಸಿಡಿಸಿ ತಂಡದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಇವರನ್ನು ಹೊರತು ಪಡಿಸಿದರೆ ಉಪನಾಯಕ ಅಜಿಂಕ್ಯ ರಹಾನೆ ಭರವಸೆಯ ಆಟಗಾರರಾಗಿದ್ದಾರೆ.
Related Articles
Advertisement
ಕಿವೀಸ್ ಸಮರ್ಥ ತಂಡಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವಿಲಿಯಮ್ಸನ್ ಪಡೆ ಬಲಿಷ್ಠವಾಗಿದೆ. ನಾಯಕ ವಿಲಿಯಮ್ಸನ್, ಅನುಭವಿ ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಬೌಲರ್‌ಗಳಾದ ಟ್ರೆಂಟ್ ಬೌಲ್ಟ್, ಕೈಲ್ ಜಾಮೀಸನ್ ಕೂಡ ಅಪಾಯಕಾರಿಯಾಗಿ ಗೋಚರಿಸಬಲ್ಲರು. ಇದಕ್ಕೆ ಕಳೆದ ಪಂದ್ಯದ ಬ್ಯಾಟಿಂಗ್‌ಗೇ ಸಾಕ್ಷಿ. ಬೌಲಿಂಗ್ ಕೂಡ ಘಾತಕವಾಗಿದೆ. ವೇಗಿಗಳಾದ ಟ್ರೆಂಟ್ ಬೌಲ್ಟ್, ಕೈಲ್ ಜಾಮೀಸನ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಟಿಮ್ ಸೌಥಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ನೀಲ್ ವ್ಯಾಗ್ನರ್ ತಂಡಕ್ಕೆ ಮರಳಿದ್ದು ತಂಡಕ್ಕೆ ಆನೆಬಲ ಬಂದಂತಾಗಿದೆ.