ಆಕ್ಲೆಂಡ್: ಇಲ್ಲಿನ ಈಡೆನ್ ಪಾರ್ಕ್ ನಲ್ಲಿ ಮತ್ತೆ ಭಾರತ- ಕಿವೀಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ.
ಎರಡೂ ತಂಡಗಳು ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಪ್ರಥಮ ಪಂದ್ಯವಾಡಿದ ತಂಡವನ್ನೇ ಇಲ್ಲಿಯೂ ಕಣಕ್ಕಿಳಿಸಲಾಗಿದೆ.
ಆಕ್ಲೆಂಡ್‌ನಲ್ಲಿ ನಡೆದ ಮೊದಲ ಮುಖಾಮುಖೀ 200 ಪ್ಲಸ್ ಮೊತ್ತದ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಸಣ್ಣ ಅಂಗಳದಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಮುನ್ನುಗ್ಗಿ ಬಾರಿಸಿದ್ದರು. ಬರೋಬ್ಬರಿ 30 ಬೌಂಡರಿ, 20 ಸಿಕ್ಸರ್‌ಗಳು ಸಿಡಿದಿದ್ದವು. ರವಿವಾರ ಇದಕ್ಕಿಂತ ಭಿನ್ನವಾದ ಆಟವನ್ನು ನಿರೀಕ್ಷಿಸುವುದು ಬೇಡವೆನಿಸುತ್ತದೆ. ಮತ್ತೆ ಬೌಲರ್‌ಗಳು ದಂಡಿಸಿಕೊಳ್ಳುವುದು, ಇನ್ನೂರರಾಚೆಯ ಮೇಲಾಟ ನಡೆಯುವುದು ಬಹುತೇಕ ಖಚಿತ. ಆಗ ಚೇಸಿಂಗ್ ನಡೆಸುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಆದರೆ ಕಿವೀಸ್ ನಾಯಕ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಕಿವೀಸ್ ತಂಡ 225ರ ತನಕವಾದರೂ ಸಾಗಬೇಕು!
ಸಂಭಾವ್ಯ ತಂಡಗಳು
ಭಾರತ
ರೋಹಿತ್ ಶರ್ಮ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಹಲ್, ಜಸ್‌ಪ್ರೀತ್ ಬುಮ್ರಾ.
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ನಾಯಕ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ರಾಸ್ ಟೇಲರ್, ಟಿಮ್ ಸೀಫರ್ಟ್, ಮಿಚೆಲ್ ಸ್ಯಾಂಟ್ನರ್, ಬ್ಲೇರ್ ಟಿಕ್ನರ್, ಟಿಮ್ ಸೌಥಿ, ಐಶ್ ಸೋಧಿ, ಹಾಮಿಶ್ ಬೆನೆಟ್.