Advertisement

2ನೇ ಹಂತದ ಕೋವಿಡ್ ಲಸಿಕೆಗೆ ಚಾಲನೆ

12:47 PM Mar 02, 2021 | Team Udayavani |

ಬಾಗಲಕೋಟೆ: ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡ ಎರಡನೇ ಹಂತದ ಕೋವಿಡ್‌-19 ಲಸಿಕೆ ನೀಡುವ ಅಭಿಯಾನಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಸೋಮವಾರ ಚಾಲನೆ ನೀಡಿದರು.

Advertisement

ನೂತನ ಜಿಪಂ ಸಭಾಭವನದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೋವಿಡ್‌ ನಿಯಂತ್ರಣಕ್ಕೆ ಲಸಿಕೆ ಕಂಡುಹಿಡಿಯಲಾಗಿದೆ. ಈ ಲಸಿಕೆ ಸುರಕ್ಷಿತವಾಗಿದ್ದು, ಇದನ್ನು ಹಾಕಿಸಿಕೊಂಡು ರೋಗ

ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ. ಮೊದಲ ಹಂತದಲ್ಲಿ ಕೋವಿಡ್‌ ನಿಯಂತ್ರಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಫಲಾನುಭವಿಗಳಿಗೆ ನೀಡಲಾಗಿದೆ. ನಂತರ ಕಂದಾಯ, ಪೌರಾಡಳಿತ, ಪಂಚಾಯತ ರಾಜ್‌ ಇಲಾಖೆ, ಪೊಲೀಸ್‌ ಇಲಾಖೆ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಬಳಿಕ ಸಂಸದ ಪಿ.ಸಿ.ಗದ್ದಿಗೌಡರ ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆ ಪಡೆದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್‌.ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಮಾ. 1ರಿಂದ ಮೂರನೇ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷದಿಂದ 59 ವರ್ಷದೊಳಗಿನ ಅನಾರೋಗ್ಯಹೊಂದಿರುವವರಿಗೆ ನೀಡಲಾಗುತ್ತಿದೆ. ಅಂತವರುತಮ್ಮ ಆಧಾರ್‌ ಕಾರ್ಡ್‌ನೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.

ಕೋವಿಡ್‌ ಲಸಿಕೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ 250 ರೂ.ಗಳ ನೀಡಿ ಪಡೆದುಕೊಳ್ಳಬಹುದಾಗಿದೆ.ಜಿಲ್ಲೆಯಲ್ಲಿ ನವನಗರದ ಜಿಲ್ಲಾ ಆಸ್ಪತ್ರೆ ಮತ್ತು ಜಮಖಂಡಿ, ಮುಧೋಳ, ಬೀಳಗಿ, ಹುನಗುಂದ, ಬಾದಾಮಿ ಸರಕಾರಿ ತಾಲೂಕು ಆಸ್ಪತ್ರೆ, ಬಾಗಲಕೋಟೆಯ ಹಾನಗಲ್‌ ಕುಮಾರೇಶ್ವರ ಆಸ್ಪತ್ರೆ, ಕೆರೂಡಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಶಾಸಕ ಡಾ| ವೀರಣ್ಣ ಚರಂತಿಮಠ,ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ, ಜಿಪಂಸಿಇಒ ಟಿ.ಭೂಬಾಲನ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ|ಬಿ.ಜಿ.ಹುಬ್ಬಳ್ಳಿ ಉಪಸ್ಥಿತರಿದ್ದರು.

Advertisement

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 250ರೂ. ಗೆ ಲಸಿಕೆ ನೀಡಲಾಗುತ್ತಿದೆ. ಬಾಗಲಕೋಟೆಯಧನುಷ್‌ ಆಸ್ಪತ್ರೆ, ಬರಗಿ, ದಡ್ಡೇನವರ, ಶಾಂತಿ, ಕೆರೂಡಿ ಆಸ್ಪತ್ರೆಗಳು, ಪಾಟೀಲ ಮೆಡಿಕೇರ್‌,ಸಂಜೀವಿನಿ, ಸ್ಪಂದನಾ, ಎಂ.ಎಸ್‌. ಕೆರೂಡಿ ಆಸ್ಪತ್ರೆ(ಹಳೆಯ ಆಸ್ಪತ್ರೆ), ಕಟ್ಟಿ ಆಸ್ಪತ್ರೆ, ಶಕುಂತಲಾಆಸ್ಪತ್ರೆ, ಗುಳೇದ ಆಸ್ಪತ್ರೆ, ವಿದ್ಯಾಗಿರಿಯ ಆಶ್ರಯಆಸ್ಪತ್ರೆ, ಕುಮಾರೇಶ್ವರ ಆಸ್ಪತ್ರೆ, ಕುಂಟೋಜಿಆಸ್ಪತ್ರೆ, ಇಳಕಲ್ಲದ ಮಹಾಂತೇಶ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ, ಬಾದಾಮಿಯ ಡಾ|ಆರ್‌.ಜಿ. ಕಾರೂಡಗಿಮಠ ಆಸ್ಪತ್ರೆ, ಮಹಾಲಿಂಗಪುರದಡಾ|ಎ.ಆರ್‌. ಬೆಳಗಲ್‌ ಆಸ್ಪತ್ರೆ, ಆರೋಗ್ಯಧಾಮಆಸ್ಪತ್ರೆ, ರಿತಿ ಲೈಫ್‌ ಕೇರ್‌ ಆಸ್ಪತ್ರೆ, ರನ್ನ ಸರ್ಕಲ್‌ನ ಶಾರದಾ ಅರ್ಥೋ ಸ್ಪೆಶಾಲಿಟಿ ಆಸ್ಪತ್ರೆ,ರಬಕವಿಯ ತ್ರಿಶಿಲಾದೇವಿ ಆಸ್ಪತ್ರೆ, ತೇರದಾಳ ಪದ್ಮಾ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next