Advertisement

 ದ್ವಿತೀಯ ಪಿಯು ಪರೀಕ್ಷೆ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದ ಸಚಿವ ಸುರೇಶ್ ಕುಮಾರ

06:41 PM Feb 12, 2021 | Team Udayavani |

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪಿಯು ಪರೀಕ್ಷೆಗಳು ಮೇ 24 ರಿಂದ ಜೂ. 16 ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

Advertisement

ಈ ಹಿಂದೆ ವೇಳಾಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿಗೆ ಒಂದು ವಾರ ಸಮಯ ನಿಗದಿಪಡಿಸಿತ್ತು. ರಾಜ್ಯದ ವಿವಿಧೆಡೆಯ ಹಲವಾರು ಪೋಷಕರು ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ಸಲ್ಲಿಸಿದ ಮನವಿಗಳು ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೆಯೇ ನೀಟ್, ಜೆಇಇ ಗಳಂತಹ ಮುಂದಿನ ತರಗತಿಗಳ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಸಚಿವರು ತಿಳಿಸಿದರು.

24-05-2021- ಇತಿಹಾಸ,

25-05-2021-ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ,

26-05-2021 ಭೂಗೋಳ ಶಾಸ್ತ್ರ,

Advertisement

27-05-2021 ಮನಃಶಾಸ್ತ್ರ/ ಬೇಸಿಕ್ ಮ್ಯಾತ್ಸ್,

28-05-2021 ತರ್ಕಶಾಸ್ತ್ರ,

29-05-2021 ಹಿಂದಿ,

30-05-2021 ಭಾನುವಾರ –ರಜೆ,

31-05-2021 ಇಂಗ್ಲಿಷ್,

01-06-2021 ಮಾಹಿತಿ ತಂತ್ರಜ್ಞಾನ/ಹೆಲ್ತ್‍ಕೇರ್/ವೆಲ್‍ನೆಸ್‍ಬ್ಯೂಟಿ,

02-06-2021 ರಾಜ್ಯಶಾಸ್ತ್ರ/ಗಣಕ ವಿಜ್ಞಾನ,

03-06-2021 ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್

04-06-2021 ಅರ್ಥಶಾಸ್ತ್ರ,

05-06-2021 ಗೃಹ ವಿಜ್ಞಾನ,

06-06-2021 ಭಾನುವಾರ –ರಜೆ,

07-06-2021 ವ್ಯವಹಾರ ಅಧ್ಯಯನ/ ಭೌತಶಾಸ್ತ್ರ,

08-06-2021 ಐಚ್ಛಿಕ ಕನ್ನಡ,

09-06-2021, ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್,

10-06-2021 ಸಮಾಜ ಶಾಸ್ತ್ರ/ ರಸಾಯನಶಾಸ್ತ್ರ,

11-06-2021 ಉರ್ದು/ ಸಂಸ್ಕೃತ,

12-06-2021 ಸಂಖ್ಯಾಶಾಸ್ತ್ರ,

13-06-2021 ಭಾನುವಾರ ರಜೆ,

14-06-2021 ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ,

15-06-2021 ಭೂಗರ್ಭಶಾಸ್ತ್ರ,

16-06-2021 ಕನ್ನಡ ಪರೀಕ್ಷೆಗಳು ನಡೆಯಲಿವೆ ಎಂದರು.

ಶೀಘ್ರದಲ್ಲೇ ಎಸ್ ಎಸ್ ಎಲ್ ಸಿ ಅಧಿಕೃತ ವೇಳಾಪಟ್ಟಿ ಪ್ರಕಟ: ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಲು ಅವಧಿ ಮುಗಿದ ತಕ್ಷಣವೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next