Advertisement

2ನೇ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

02:44 PM Feb 09, 2021 | Team Udayavani |

ಹಾಸನ: ಕೊರೊನಾ ಎರಡನೇ ಅಲೆ ಬರುವುದಕ್ಕಿಂತ ಮೊದಲೇ ಲಸಿಕೆಯನ್ನು ಹಾಕಿಸಿಕೊಂಡು ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಆಶಿಸಿದರು.

Advertisement

ನಗರದ ವೈದ್ಯಕೀಯ ಕಾಲೇಜು (ಹಿಮ್ಸ್‌) ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೊರೊನಾ ಲಸಿಕೆ ಹಾಕುವ ಎರಡನೇ ಹಂತದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2ನೇ ಹಂತದಲ್ಲಿ ಸಾರ್ವಜನಿಕ ಸೇವೆಯ ಫ್ರೆಂಟ್‌ ಲೈನ್‌ ವಾರಿಯರ್ ಎಂದು ಗುರುತಿಸಿರುವ ಪೌರ ಕಾರ್ಮಿಕರು, ಗ್ರಾಮ ಪಂಚಾಯ್ತಿ ನೌಕರರು, ಪೊಲೀಸ್‌, ಕಂದಾಯ ಇಲಾಖೆ ನೌಕರರಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಲಸಿಕೆ ಹಾಕಿಸಿಕೊಳ್ಳುವವರು ಮುಂಗಡವಾಗಿ ಆನ್‌ ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಫ್ರಂಟ್‌ಲೆನ್‌ ವಾರಿಯರ್ಗೆ ಮೂರು ದಿನಗಳ ಕಾಲ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲಿ 8 ಸಾವಿರ ಜನ ಫ್ರೆಂಟ್‌ಲೆçನ್‌ ವಾರಿಯರ್ ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ಸ್ವಯಂ ಪ್ರೇರಿತರಾಗಿ ಆಗಮನ: 2ನೇ ಹಂತದ ಲಸಿಕೆ ಕಾರ್ಯಕ್ರಮದ ಮೊದಲ ದಿನ ಹಿಮ್ಸ್‌ ಆಸ್ಪತ್ರೆ,  ಎಲ್ಲಾ ತಾಲೂಕು ಆಸ್ಪತ್ರೆಗಳು ಸೇರಿ 23 ಸ್ಥಳಗಳಲ್ಲಿ 2,596 ಜನರಿಗೆ ಕೊರೊನಾ ಲಸಿಕೆ ಹಾಕುವ ಗುರಿ ನಿಗದಿಯಾಗಿದೆ ಎಂದ ಅವರು, ಲಸಿಕೆ ಪಡೆಯುವಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಹಂತದಲ್ಲಿ ನಿರೀಕ್ಷಿಸಿದಷ್ಟು ಗುರಿ ಸಾಧನೆಯಾಗದೆ ಸಲ್ಪ ಹಿನ್ನಡೆಯಾಗಿತ್ತು. ಎರಡನೇ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ :ರಾಗಿ ಖರೀದಿ ಕೇಂದ್ರ ಆರಂಭ

Advertisement

ಕೊರೊನಾ ನಿರ್ಮೂಲನೆ: ಕಳೆದ ಶುಕ್ರವಾರ ತಾವೂ ಲಸಿಕೆ ಹಾಕಿಸಿಕೊಂಡಿದ್ದೇನೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡು ಬಂದಿಲ್ಲ. ಆದ್ದರಿಂದ ಹಿಂಜರಿಕೆ ಬಿಟ್ಟು ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳುವ ಮುಂಚೆಯೇ ಲಸಿಕೆಯನ್ನು ತೆಗೆದುಕೊಂಡು ನಾವೆಲ್ಲರೂ ಸಬಲರಾಗೋಣ, ಕೊರೊನಾ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಗೊಳಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ ಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಆರ್‌ಸಿಎಚ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next