Advertisement
ಬಿ.ವೈ. ರಾಘವೇಂದ್ರ ಭರ್ಜರಿ ರೋಡ್ ಶೋ
ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಶಾಸಕ ಹಾಗೂ ಹಿರಿಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ಆಶೀರ್ವಾದ ಪಡೆದರು.
Related Articles
ಬಿ.ವೈ. ರಾಘವೇಂದ್ರ ಅವರ ಕುಟುಂಬದ ಚರಮತ್ತು ಸ್ಥಿರಾಸ್ತಿಯ ಮೌಲ್ಯವು ಕೇವಲ ಐದು ತಿಂಗಳಲ್ಲಿ 12 ಕೋಟಿ ರೂ. ಏರಿಕೆಯಾಗಿದೆ. 2014ರ ವಿಧಾನಸಭೆ ಉಪ ಚುನಾವಣೆಗೆ ಹೋಲಿಕೆ ಮಾಡಿದರೆ ಅವರ ಆಸ್ತಿಯು 3 ಪಟ್ಟು ಹೆಚ್ಚಳವಾಗಿದೆ.
2014ರಲ್ಲಿ 18.34 ಕೋಟಿ ರೂ. ಚರ ಮತ್ತು 15.22 ಕೋಟಿ ರೂ. ಸ್ಥಿರಾಸ್ತಿ, ಅಕ್ಟೋಬರ್‌ನಲ್ಲಿ ನಡೆದ ಲೋಕಸಭೆ ಉಪ ಚುನಾವಣೆ ಸಂದರ್ಭದಲ್ಲಿ 32.09
ಕೋಟಿ ರೂ. ಚರ ಮತ್ತು 30.91ಕೋಟಿ ರೂ.ಸ್ಥಿರಾಸ್ತಿಗೆ ಏರಿಕೆಯಾಗಿತ್ತು. ಅಲ್ಲಿಂದ ಈಚೆಗೆ ಐದೇ ತಿಂಗಳಲ್ಲಿ 32 ಕೋಟಿ ರೂ. ಚರ ಮತ್ತು 43 ಕೋಟಿ ರೂ. ಸ್ಥಿರಾಸ್ತಿಗೆ ಏರಿಕೆಯಾಗಿದೆ.
Advertisement
ಸಂಸದ ಸುರೇಶ ಅಂಗಡಿ 14 ಕೋಟಿ ಆಸ್ತಿ ಒಡೆಯಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4ನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿಯ ಸುರೇಶ ಅಂಗಡಿ ಗುರುವಾರ ನಾಮಪತ್ರ ಸಲ್ಲಿಸಿದರು. ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸುರೇಶ ಅಂಗಡಿ, ಚುನಾವಣಾ ಆಯೋ ಗಕ್ಕೆ ತಮ್ಮ ಕುಟುಂಬದ
ಆಸ್ತಿ ವಿವರ ಸಹ ಸಲ್ಲಿಸಿದರು. ಆ ಪ್ರಕಾರ ಐದು ವರ್ಷಗಲ್ಲಿ ಅವರ ಆಸ್ತಿ ಮೌಲ್ಯ ಸುಮಾರು 2 ಕೋಟಿ ಹೆಚ್ಚಾಗಿದೆ.
ಸುರೇಶ ಅಂಗಡಿ ತಮ್ಮ ಹೆಸರಿನಲ್ಲಿ 14.37 ಕೋಟಿ ಆಸ್ತಿ ಘೋಷಿಸಿದ್ದಾರೆ. ತಮ್ಮ ಹೆಸರಿನಲ್ಲಿ 56.91 ಲಕ್ಷ ನಗದು, ಪತ್ನಿ ಮಂಗಳಾ 69.23 ಲಕ್ಷ ನಗದು ಹೊಂದಿದ್ದಾರೆ. ವಿವಿಧ ಬ್ಯಾಂಕ್ ಗಳಲ್ಲಿ 17.32 ಲಕ್ಷ ನಗದು, ವಿವಿಧೆಡೆ ಹೂಡಿಕೆ, ಚಿನ್ನಾಭರಣ, ವಾಹನಗಳು ಸೇರಿ 2.12 ಕೋಟಿ ಚರಾಸ್ತಿ ಮತ್ತು 12.24 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 7.69 ಕೋಟಿ ರೂ. ಸಾಲವಿದೆ. ಸಂಸದರು, ಕೋಟ್ಯಧಿಪತಿಯಾದರೂ ಅವರ ಬಳಿ ಸ್ವಂತ ಕಾರಿಲ್ಲ. 4 ಸ್ಕೂಟರ್, ಒಂದು ಬೈಸಿಕಲ್ ಮಾತ್ರ ಅವರ ಹೆಸರ ಲ್ಲಿದೆ.
300 ಗ್ರಾಂ. ಚಿನ್ನಾಭರಣವಿದೆ. ಪತ್ನಿ ಹೆಸರಲ್ಲಿ 2 ಕಾರು ಸೇರಿ 36 ಸ್ಕೂಟರ್ ಹಾಗೂ ಇತರ ವಾಹನಗಳಿವೆ. ಅವರು 1,300 ಗ್ರಾಂ. ಚಿನ್ನಾಭರಣ ಹೊಂದಿದ್ದಾರೆ. ವೀಣಾ ಕಾಶಪ್ಪನವರ ಉಮೇದುವಾರಿಕೆ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ
ಜಿಪಂ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ ಗುರುವಾರ ಜಿಲ್ಲಾ
ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಿದರು. ಮಾಜಿ ಸಚಿವ ಎಚ್.
ವೈ. ಮೇಟಿ, ನರಗುಂದ ಮಾಜಿ ಶಾಸಕ ಬಿ.ಆರ್. ಯಾವಗಲ್, ಕೆಪಿಸಿಸಿ
ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ಎಂ.ಎಲ್. ಶಾಂತಗೇರಿ,ಹೈಕೋರ್ಟ್ ವಕೀಲ ಗಂಗಾಧರಪ್ಪ ಸೇರಿದಂತೆ ಕುಟುಂಬ ಸದಸ್ಯರು ಸಾಥ್ ನೀಡಿದರು.
ಏ.1ಕ್ಕೆ ಮತ್ತೆ ನಾಮಪತ್ರ: ಗುರುವಾರ ಶುಭ ದಿನವಾದ್ದರಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ.1ರಂದು
ಮತ್ತೂಂದು ನಾಮಪತ್ರ ಸಲ್ಲಿಸಲಾಗುವುದು ಎಂದು ವೀಣಾ ಕಾಶಪ್ಪನವರ ತಿಳಿಸಿದರು. 4 ಕೋಟಿ ಆಸ್ತಿಯ ಒಡತಿ
ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ 4 ಕೋಟಿ ಆಸ್ತಿಯ ಒಡತಿ. 66,55,753
ರೂ. ಚರಾಸ್ತಿ, 3,35,80,000 ರೂ. ಸ್ಥಿರಾಸ್ತಿ ಹೊಂದಿದ್ದು, 200 ಗ್ರಾಂ. ಚಿನ್ನದ ಒಡವೆ
ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 1,62,72,759 ರೂ. ಸಾಲ ಹೊಂದಿದ್ದು, ಒಟ್ಟು
4,02,35,753 ಆಸ್ತಿಯ ಒಡತಿಯಾಗಿದ್ದಾರೆ. 1,62,72,759 ರೂ. ಸಾಲ: ಬೆಂಗಳೂರಿನ ಎಸ್‌ಬಿಐ ಬ್ಯಾಂಕ್ (ಮೈಸೂರು ಬ್ಯಾಂಕ್ ವೃತ್ತ)ನಲ್ಲಿ 1,23,11,206 ರೂ. ಹೌಸಿಂಗ್ ಲೋನ್, ಹುನಗುಂದದ ಶಂಕರ ಬ್ಯಾಂಕ್ ನಲ್ಲಿ 2.50 ಲಕ್ಷ ವಾಹನ ಸಾಲಸೇರಿ ಒಟ್ಟು 1,62,72,759 ರೂ. ಸಾಲ ಹೊಂದಿದ್ದಾರೆ.