Advertisement
ಹಿರಿಯೂರು ತಾಲೂಕಿನ 33, ಚಳ್ಳಕೆರೆ ತಾಲೂಕಿನ40 ಹಾಗೂ ಮೊಳಕಾಲ್ಮೂರು ತಾಲೂಕಿನ 16ಗ್ರಾಪಂಗಳು ಸೇರಿದಂತೆ ಒಟ್ಟು 89 ಗ್ರಾಪಂಗಳ1668 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ಷೋಷಣೆಯಾಗಿತ್ತು. ಇದರಲ್ಲಿ 189 ಸದಸ್ಯರು ಅವಿರೋಧ ವಾಗಿ ಆಯ್ಕೆಯಾಗಿದ್ದು, 4 ಸ್ಥಾನಗಳಿಗೆನಾಮಪತ್ರ ಸಲ್ಲಿಕೆಯಾಗಿಲ್ಲ. ಹೀಗಾಗಿ1475 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
Related Articles
Advertisement
ಹಿರಿಯೂರು ತಾಲೂಕಿನ 33 ಗ್ರಾಪಂಗಳಿಗೆ ಸಂಬಂಧಿಸಿದಂತೆ ಮಸ್ಟರಿಂಗ್, ಡಿ-ಮಸ್ಟರಿಂಗ್‌ಹಾಗೂ ಮತ ಎಣಿಕೆ ಕೇಂದ್ರವನ್ನು ಹಿರಿಯೂರುನಗರದ ಮುಖ್ಯರಸ್ತೆಯ ಗುರುಭವನದಪಕ್ಕದಲ್ಲಿರುವ ಗಿರೀಶ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ಗ್ರಾಪಂ ಚುನಾವಣೆ ಸಂಬಂಧ ಮಾದರಿನೀತಿಸಂಹಿತೆ ತಂಡ ರಚಿಸಿದ್ದು, ಜಿಲ್ಲಾ ಮಟ್ಟದಲ್ಲಿ ಜಿಪಂ ಸಿಇಒ, ತಾಲೂಕು ಮಟ್ಟದಲ್ಲಿ ಇಒಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒಗಳು ತಂಡದಲ್ಲಿದ್ದಾರೆ.
ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಮೊಳಕಾಲ್ಮೂರು ತಾಲೂಕಿಗೆ 30 ಬಸ್ ಹಾಗೂ ಸೆಕ್ಟರ್‌ಅಧಿಕಾರಿಗಳಿಗೆ 15 ಜೀಪ್, ಚಳ್ಳಕೆರೆ ತಾಲೂಕಿಗೆ 62ಬಸ್ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ 12 ಜೀಪ್,ಹಿರಿಯೂರು ತಾಲೂಕಿಗೆ 47 ಬಸ್, 2 ಮಿನಿ ಬಸ್ ಹಾಗೂ ಸೆಕ್ಟರ್ ಅ ಧಿಕಾರಿಗಳಿಗೆ 30 ಜೀಪ್ ಸೇರಿದಂತೆ ಒಟ್ಟು 139 ಬಸ್, 2 ಮಿನಿ ಬಸ್ ಹಾಗೂ 57 ಜೀಪ್ ವ್ಯವಸ್ಥೆ ಮಾಡಲಾಗಿದೆ.
ಮತದಾನಕ್ಕೆ 22 ರಲ್ಲಿ ಒಂದು ದಾಖಲೆ ತನ್ನಿ :
ಮತದಾರರು ಎಪಿಕ್ ಕಾರ್ಡ್ ಅಲ್ಲದೇ ಇತರೆ 22 ದಾಖಲೆಗಳ ಯಾವುದಾದರೊಂದು ದಾಖಲೆಯನ್ನು ನೀಡಿ ಮತ ಚಲಾಯಿಸಬಹುದು. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್,ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳುಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್, ಕಿಸಾನ್ ಮತ್ತು ಅಂಚೆ ಕಚೇರಿನೀಡಿರುವ ಭಾವಚಿತ್ರವಿರುವ ಪಾಸ್‌ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳುವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್‌ಗಳು, ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳನ್ನು ತೋರಿಸಿ ಮತ ಹಾಕಬಹುದು.
ಕೋವಿಡ್ ಮಾರ್ಗಸೂಚಿ ಕಡ್ಡಾಯ :
ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮೊದಲು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸಬೇಕು.ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರನ್ನು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸಂಬಂಧಪಟ್ಟ ಮತಗಟ್ಟೆಗಳಿಗೆ ಮತದಾನದ ಕೊನೆಯ ಒಂದು ಗಂಟೆಯ ಅವ ಯಲ್ಲಿ ಕರೆತಂದು ಮತದಾನದ ನಂತರ ಅವರನ್ನು ಸ್ವಸ್ಥಾನಕ್ಕೆ ಮರಳಿ ಕರೆದೊಯ್ಯಬೇಕು.