Advertisement

ಪಾಕ್‌ ತಂಡದಲ್ಲಿ ಬರೋಬ್ಬರಿ 29 ಮಂದಿ!

02:13 AM Jun 13, 2020 | Sriram |

ಲಾಹೋರ್‌: ಅಭೂತ ಪೂರ್ವ ನಿರ್ಧಾರವೊಂದರಲ್ಲಿ ಮುಂಬರುವ ಇಂಗ್ಲೆಂಡ್‌ ಪ್ರವಾಸಕ್ಕೆ ಪಾಕಿಸ್ಥಾನ ಬರೋಬ್ಬರಿ 29 ಕ್ರಿಕೆಟಿಗರ ಬೃಹತ್‌ ತಂಡವನ್ನು ಪ್ರಕಟಿಸಿದೆ.

Advertisement

ಕೋವಿಡ್-19 ಮುನ್ನೆಚ್ಚರಿಕೆಯ ಕಾರಣ ಹೆಚ್ಚುವರಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಪಿಸಿಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಇಂಗ್ಲೆಂಡಿನ ನೂತನ ಪ್ರಯಾಣ ನಿಯಮದಂತೆ, ಈ ಆಟಗಾರರೆಲ್ಲ ಸರಣಿ ಆರಂಭದಿಂದ ಕೊನೆಯ ತನಕ ಅಲ್ಲಿಯೇ ಉಳಿಯಬೇಕಿದೆ. ಸರಣಿಯಲ್ಲಿ 3 ಟೆಸ್ಟ್‌ ಮತ್ತು 3 ಟಿ20 ಪಂದ್ಯಗಳನ್ನು ಆಡಲಾಗುವುದು.

ತಂಡದಲ್ಲಿ 4 ಆರಂಭಿಕರು, ಇಬ್ಬರು ಕೀಪರ್, 9 ಮಂದಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌, 10 ಮಂದಿ ವೇಗಿಗಳು ಹಾಗೂ 4 ಸ್ಪಿನ್ನರ್‌ಗಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next