ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ 29 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಇಂದಿನ ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಸಿಂಹಪಾಲು ರಾಜಧಾನಿ ಬೆಂಗಳೂರಿನಿಂದಲೇ ವರದಿಯಾಗಿದೆ. 29 ಜನರಲ್ಲಿ 19 ಸೋಂಕು ಪ್ರಕರಣಗಳು ಬೆಂಗಳೂರು ನಗರದಲ್ಲಿ ದೃಢವಾಗಿದೆ.
ಬೆಂಗಳೂರಿನ ಸೋಂಕಿತ ಸಂಖ್ಯೆ 419ರ ಸಂಪರ್ಕದಿಂದ ಮತ್ತೆ 11 ಜನರಿಗೆ ಸೋಂಕು ಹರಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 120 ಆಗಿದ್ದು, 67 ಪ್ರಕರಣಗಳೂ ಸಕ್ರಿಯವಾಗಿದೆ.
ವಿಜಯಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದೃಢವಾಗಿದ್ದು, ಸೋಂಕಿತ ಸಂಖ್ಯೆ 221ರ ಸಂಪರ್ಕದಿಂದ 27 ವರ್ಷದ ವ್ಯಕ್ತಿಗೆ ಸೋಂಕು ತಾಗಿದೆ.
ಬಾಗಲಕೋಟೆಯ ಮುದೋಳದ ಮತ್ತೋರ್ವ ಬಾಲಕನಿಗೆ ಸೋಂಕು ತಾಗಿದ್ದು, ಸೋಂಕಿತ ಸಂಖ್ಯೆ 380ರ ಸಂಪರ್ಕದಿಂದ 14 ವರ್ಷದ ಬಾಲಕನಿಗೆ ಸೋಂಕು ದೃಢವಾಗಿದೆ.
ಇಂದಿನ 29 ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ. ಅದರಲ್ಲಿ 18 ಪ್ರಕರಣಗಳು ಮೃತಪಟ್ಟಿದ್ದು, 152 ಜನರು ಬಿಡುಗಡೆ ಹೊಂದಿದ್ದಾರೆ.