Advertisement

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ೨೯.೦೩% ಮತದಾನವಾಗಿದೆ.

Advertisement

ಉಡುಪಿಯಲ್ಲಿ 30. 27% , ಕುಂದಾಪುರದಲ್ಲಿ 32.67% , ಕಾರ್ಕಳ 31. 77% ಹಾಗೂ ಕಾಪು 32.35 % ನಡೆದರೆ ಚಿಕ್ಕಮಗಳೂರು 24.10%, ಮೂಡಿಗೆರೆ 27.05% ಶೃಂಗೇರಿ 30.96% ಹಾಗೂ ತರೀಕೆರೆ 23.18% ಮತದಾನವಾಗಿದೆ.

ಬೆಳಿಗ್ಗೆಯಿಂದಲೇ ಮತದಾರರು ತಮ್ಮ ತಮ್ಮ ಮತಗಟ್ಟೆಗಳಿಗೆ ಬಂದು ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸುತ್ತಿದ್ದಾರೆ, ಸುಡು ಬಿಸಿಲನ್ನು ಲೆಕ್ಕಿಸದೆ ಮತದಾರರು ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ಮತ ಚಲಯಿಸುತ್ತಿರುವುದು ಕಂಡು ಬಂದಿದೆ, ಕೆಲವು ಮತಗಟ್ಟೆಗಳಲ್ಲಿ ಬಿಸಿಲಿಗೆ ಬಳಲಿ ಬಂದ ಮತದಾರರಿಗೆ ಕುಡಿಯಲು ನೀರು ಬೆಲ್ಲದ ವ್ಯವಸ್ಥೆಯನ್ನು ಮಾಡಲಾಗಿದೆ.

ಹದಿನೆಂಟು ವರ್ಷದ ಯುವಕ ಯುವತಿಯರಿಂದ ಹಿಡಿದು ಅಜ್ಜ ಅಜ್ಜಿಯರೂ ಮತಗಟ್ಟೆಗಳತ್ತ ಹೆಜ್ಜೆ ಹಾಕುವ ಮೂಲಕ ಮತದಾನದ ಅಗತ್ಯತೆಯನ್ನು ಮನವರಿಕೆ ಮಾಡಿದ್ದಾರೆ.

Advertisement

ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಟ್ಟೆಚ್ಚರ:
ಕಾರ್ಕಳ ತಾಲೂಕಿನ ನಕ್ಸಲ್ ಪೀಡಿತ ಮಾಳ ಮತಗಟ್ಟೆಯಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿತ್ತು, ಈ ವೇಳೆ 99 ವರ್ಷದ ಬಿರ್ಕು ಹಿರಿಯ ಅಜ್ಜಿಯೊಬ್ಬರು ವಾಹನದ ವ್ಯವಸ್ಥೆ ಮಾಡಿದರೂ ಬೇಡವೆಂದು ಕಿಲೋಮೀಟರ್ ಗಟ್ಟಲೇ ದೂರದಿಂದ ನಡೆದೇ ಬಂದು ಮತವನ್ನು ಚಲಾಯಿಸಿರುವುದು ಕಂಡುಬಂತು.

ಚಿಕ್ಕಮಗಳೂರು:
ಕಾಫಿನಾಡಿ ನಲ್ಲಿ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿ ಯುತವಾಗಿ ಸಾಗುತ್ತಿದ್ದು, ನವ ಮಧು ಮತದಾನ ಮಾಡಿದ್ದು ವಿಶೇಷವಾಗಿದೆ.

ಮೂಡಿಗೆರೆ ತಾಲೂಕು ಕುಂದೂ ರು ಮತಕೇಂದ್ರದಲ್ಲಿ ನವ ವಧು ತಳವಾರ ಗ್ರಾಮದ ಸೌಮ್ಯ ಹಸಮಣೆ ಏರುವ ಮೊದಲು ತಮ್ಮ ಹಕ್ಕು ಚಲಾಯಿಸಿದರು.
ಇನ್ನೂ ಸ್ವಾಮೀಜಿಗಳು ಹಾಗೂ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದು ಬಾಳೆಹೊ ನ್ನೂರು ರಂಭಾಪುರಿ ಶ್ರೀ ರಂಭಾಪುರಿ ಮಠದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು, ಮತದಾನ ಸಂವಿಧಾನ ಕೊಟ್ಟ ಅಧಿಕಾರ ಎಂಬುದನ್ನು ಮರೆಯಬೇಡಿ, ಸಧೃಡ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.

ಕೊಪ್ಪ ತಾಲೂಕು ಹರಿಹರಪುರ ಶ್ರೀಮಠದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಹರಿಹರಪುರ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ವಿನಂತಿಸಿದರು.

ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಚಿಕ್ಕಕುರುಬರಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 138 ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಇವಿಎಂ ದೋಷ ಸ್ಥಗಿತಗೊಂಡ ಯಂತ್ರ ಗಂಟೆಗೂ ಹೆಚ್ಚು ಕಾಲ ಕಾದು ಕುಳಿತ ಮತದಾರರು ಚಿಕ್ಕಮಗಳೂರು ತಾಲೂಕು ಅರೆನೂರು ಗ್ರಾಮದಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 53ರಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದಿದ್ದು ಮತದಾರರು ಒಂದು ಗಂಟೆಗೂ ಹೆಚ್ಚುಕಾಲ ಕಾದು ಕುಳಿತುಕೊಳ್ಳಬೇಯಿತು. ಮತಗಟ್ಟೆ ಅಧಿಕಾರಿಗಳು ಇವಿಎಂ ಯಂತ್ರದಲ್ಲಿ ದೋಷವನ್ನು ಸರಿಪಡಿಸಿ ಮತದಾನ‌ ಪ್ರಕ್ರಿಯೆಗೆ ಅನುವು ಮಾಡಿಕೊಡಲಾಯಿತು.

ನರಸಿಂಹರಾಜಪುರ ತಾಲೂಕು ಮೆಣಸೂರು ಗ್ರಾಮದಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಇವಿಎಂ ದೋಷ ಕಂಡು ಬಂದಿದ್ದು ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತ್ತು. ಕೆಲಸಕ್ಕೆ ತೆರಳುವ ಕಾರ್ಮಿಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇವಿಎಂ ಮಿಶಿನ್ ದುರಸ್ತಿ ನಂತರ‌ ಮತದಾನ ಪ್ರಕ್ರಿಯೇ ಮುಂದೂವರೆಯಿತು.

ಬಯಲು ಸೀಮೆ ಭಾಗದಲ್ಲಿ ಉರಿ ಬಿಸಿಲಿನ‌ ನಡುವೆ ಮತದಾರರು ಮತಗಟ್ಟೆಯಲ್ಲಿ ಸರತಿಯಲ್ಲಿ ನಿಂತು ಮತದಾನ ಮಾಡಿದರು.

ಇದನ್ನೂ ಓದಿ: ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next