Advertisement

ಮೀರಾರೋಡ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ 28ನೇ ವಾರ್ಷಿಕ ಮಹೋತ್ಸವ

03:46 PM Jun 16, 2019 | Team Udayavani |

ಮುಂಬಯಿ: ದೂರ ಹೋಗಿರುವ ಬಂಧುಗಳನ್ನು ಆಯಸ್ಕಾಂತದಂತೆ ಮನೆಗೆ ಕರೆದು ತಂದು ಮನುಷ್ಯ ಒಂಟಿಯಲ್ಲ ಸಮಾಜ ಜೀವಿ ಎಂಬ ಸತ್ಯವನ್ನು ಊರಿನ ಜಾತ್ರೆಗಳು ಸಾರುತ್ತವೆ. ಇದರಲ್ಲಿ ದೈವಿಕ ಆರಾಧನೆಯೊಂದಿಗೆ ಊರ ಪರವೂರ ಜನರ ಒಡನಾಟ ಸಿಗುತ್ತದೆ. ಸಹಬಾಳ್ವೆಯ ಆದರ್ಶ ಇರುವ ಉತ್ಸವಗಳು ಜನರನ್ನು ಒಗ್ಗೂಡಿಸಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದು ಮೀರಾರೋಡ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾತಿಂಜ ಜನಾರ್ಧನ್‌ ಭಟ್‌ ಅವರು ಅಭಿಪ್ರಾಯಿಸಿದರು.

Advertisement

ಜೂ. 14ರಂದು ಮೀರಾರೋಡ್‌ ಪೂರ್ವದ ಮೀರಾ ಕೋ. ಆಪರೇಟಿವ್‌ ಹೌಸಿಂಗ್‌ ಸೊಸೈಟಿ ಲಿಮಿಟೆಡ್‌, ರಾಷ್ಟ್ರೀಯ ಹೆ¨ªಾರಿ ಸಮೀಪದ ಹೊಟೇಲ್‌ ಅಮರ್‌ ಪ್ಯಾಲೇಸ್‌ ಹಿಂದುಗಡೆಯಿರುವ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್‌ ಇದರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 28ನೇ ವಾರ್ಷಿಕ ಮಹೋತ್ಸವದ ಧರ್ಮ ಸಂದೇಶದಲ್ಲಿ ಆಶೀರ್ವಚನ ನೀಡಿದ ಅವರು, ದೇವಾಲಯಗಳು ಧರ್ಮ ಭೋದಕ ಕೇಂದ್ರಗಳಾಗಬೇಕು. ಸಾಂಸ್ಕೃತಿಕ ಅನಾವರಣ, ವಿಭಿನ್ನ ಸಂಸ್ಕಾರಗಳ ಕೊಂಡುಕೊಳ್ಳುವಿಕೆ ಅಲ್ಲಿ ವ್ಯವಸ್ಥಿವಾಗಿ ಆಯೋಜಿಸಬೇಕು. ಎಲ್ಲರ ಸಹಕಾರ ಹಾಗೂ ಸಹಯೋಗದಿಂದ ನೆರವೇರುವ ಪೂಜೆ ಪುನಸ್ಕಾರಗಳು ಸ್ಥಳದ ಪಾವಿತ್ರೆÂಯನ್ನು ಹೆಚ್ಚುತ್ತದೆ ಎಂದರು.

ಸಂಸ್ಥೆಯ ಸ್ಥಾಪಕ ಕೃಷ್ಣ ಜಿ. ಶೆಟ್ಟಿ, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶಿಮಂತೂರು ಮಜಲ ಗುತ್ತು ಬಾಬಾ ರಂಜನ್‌ ಶೆಟ್ಟಿ, ಪ್ರಧಾನ ಅರ್ಚಕ ಸಾಣೂರು ಸಾತಿಂಜ ಜನಾರ್ದನ್‌ ಭಟ್‌ ಅವರ ಮುಂದಾಳತ್ವದಲ್ಲಿ ವೇದಮೂರ್ತಿ ಕಾಪು ಕಲ್ಯಾ ರಜನೀಶ್‌ ತಂತ್ರಿ ಅವರ ನೇತೃತ್ವದಲ್ಲಿ, ಪ್ರಧಾನ ಆರ್ಚಕ ಸಾಂತಿಂಜ ಮಾಧವ ಭಟ್‌ ಅವರ ಪೌರೋಹಿತ್ಯದಲ್ಲಿಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, ಶ್ರೀ ಮಾಹಾಲಿಂಗೇಶ್ವರ ದೇವರಿಗೆ ನವಕ ಪ್ರಧಾನ ಅಭಿಷೇಕ, ನವಕ ಪ್ರಧಾನ ಹೋಮ, ದ್ವಾದಶಿ ನಾರಿಕೇಳ ಗಣಹೋಮ, ಶ್ರೀ ದುರ್ಗಾದೇವಿಗೆ ದುರ್ಗಾಹೋಮ, ಪ್ರಸನ್ನ ಪೂಜೆ, ಸಂಜೆ ಮಹಾ ರಂಗ ಪೂಜೆ, ಆನಂತರ ಕುಂಟಾಡಿ ಸುರೇಶ್‌ ಭಟ್‌ ಅವರಿಂದ ಶ್ರೀ ಮಹಾಲಿಂಗೇಶ್ವರ ದೇವರ ಬಲಿ, ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ದುರ್ಗೆ, ನವ ಗ್ರಹಗಳಿಗೆ ವಿಶೇಷ ಪೂಜೆ ನಡೆಯಿತು.

ವಿಜಯ ಶೆಟ್ಟಿ ದಂಪತಿ ಮತ್ತು ಮಹೇಶ್‌ ಶೆಟ್ಟಿ ಪೊಲ್ಯ ದಂಪತಿ ಅವರ ಸೇವಾರ್ಥ ಪ್ರಸಾದ ರೂಪದಲ್ಲಿ ಅನ್ನದಾನ ನೆರವೇರಿತು. ಗೌರಿ ಶಂಕರ ಕಾರಿಂಜ, ದೇವರಾಜ್‌ ಭಟ್‌, ರಾಘವೇಂದ್ರ ಉಪಾಧ್ಯಾಯ, ಅನಂತ ಭಟ್‌, ಶ್ರೀಶ ಭಟ್‌, ವಾಸುದೇವ ಭಟ್‌, ಶೀ ವತ್ಸ ಭಟ್‌ ಮತ್ತಿತ್ತರು ವೈದಿಕ ತತ್ವದಡಿ ಸಹಕರಿಸಿದರು. ಟ್ರಸ್ಟಿಗಳಾದ ಸುಂದರ ಶೆಟ್ಟಿಗಾರ್‌, ಅನಿಲ್‌ ಶೆಟ್ಟಿ, ಪ್ರಸನ್ನ ಶೆಟ್ಟಿ ಕುರ್ಕಾಲ್‌, ಪ್ರಸನ್ನ ಶೆಟ್ಟಿ ಬೋಳ ಅವರು ಉಪಸ್ಥಿತರಿದ್ದರು. ಮೀರಾ ಸೊಸೈಟಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಮುದಾಯ ಸಂಘಟನೆಗಳ ಪದಾಧಿಕಾರಿಗಳು, ಕನ್ನಡೇತರು ಕಾರ್ಯ ಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವಿಕರಿಸಿದರು.

ಚಿತ್ರ-ವರದಿ : ರಮೇಶ ಅಮೀನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next