Advertisement

28ವರ್ಷದ ಹಿಂದೆ ಚಿನ್ನಕ್ಕಾಗಿ ನಾಲ್ವರನ್ನು ಕೊಲೆಗೈದ ಪ್ರವೀಣ್‌ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

08:30 AM Aug 16, 2022 | Team Udayavani |

ಮಂಗಳೂರು : ವಾಮಂಜೂರಿನಲ್ಲಿ 28 ವರ್ಷಗಳ ಹಿಂದೆ ಚಿನ್ನಕ್ಕಾಗಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಕೊಲೆ ಮಾಡಿ ಜೈಲಿನಲ್ಲಿರುವ ಪ್ರವೀಣ್‌ ಕುಮಾರ್‌ ಬಿಡುಗಡೆಯಾಗಿಲ್ಲ ಎಂದು ಹತ್ಯೆಯಾ ದವರ ಕುಟುಂಬಸ್ಥರು ತಿಳಿಸಿದ್ದಾರೆ.

Advertisement

ನಿರಂತರ ಸಂಪರ್ಕ
ಪೊಲೀಸ್‌ ಅಧಿಕಾರಿಗಳೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾ ಗಲೇ ರಾಜ್ಯದ ಗೃಹ ಸಚಿವರು ಕೂಡ ಹಂತಕ ಪ್ರವೀಣ್‌ನನ್ನು ಬಿಡುಗಡೆ ಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಮಾಧಾನ, ಸಂತಸ
ಕಾರಾಗೃಹದಲ್ಲಿ ಸನ್ನಡತೆ ಆಧಾರದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ಪ್ರವೀಣ್‌ನನ್ನು ಬಿಡುಗಡೆ ಮಾಡುವ ಪೂರ್ವದಲ್ಲಿ ಕಾರಾಗೃಹ ಇಲಾಖೆ ಪೊಲೀಸರಿಂದ ವರದಿ ಕೇಳಿತ್ತು. ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಅದನ್ನು ಪೊಲೀಸರು ಕಾರಾಗೃಹ ಇಲಾಖೆಗೆ ರವಾನಿಸಿದ್ದರು. ಪ್ರವೀಣ್‌ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಮಾಧಾನ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next