Advertisement

ಕದಂಬ ಸಾರಿಗೆ ಮಹಾಮಂಡಳಕ್ಕೆ 28 ಕೋಟಿ ರೂ. ನಷ್ಟ

01:43 PM Jul 13, 2020 | Suhan S |

ಪಣಜಿ: ಗೋವಾ ರಾಜ್ಯ ಕದಂಬ ಸಾರಿಗೆ ಮಹಾಮಂಡಳಕ್ಕೆ ಕಳೆದ ಮೂರು ತಿಂಗಳಲ್ಲಿ ಹೆಚ್ಚಿನ ಆರ್ಥಿಕ ನಷ್ಟವುಂಟಾಗಿದೆ. ಸದ್ಯ ಲಾಕ್‌ಡೌನ್‌ ಸಡಿಲಿಕೆ ನಂತರವೂ ಕದಂಬ ಸಾರಿಗೆಯ ಹೆಚ್ಚಿನ ಬಸ್‌ಗಳು ಓಡಾಟ ನಡೆಸುತ್ತಿಲ್ಲ. ಓಡಾಟ ನಡೆಸುತ್ತಿರುವ ಬಸ್‌ಗಳಲ್ಲಿ ಕೂಡ ಪ್ರಯಾಣಿಕರ ಕೊರತೆಯಿಂದಾಗಿ ನಷ್ಟವುಂಟಾಗುತ್ತಿದೆ.

Advertisement

ಕಳೆದ ಮೂರು ತಿಂಗಳಲ್ಲಿ ಕದಂಬ ಸಾರಿಗೆ ಮಹಾಮಂಡಳಕ್ಕೆ ಸುಮಾರು 28 ಕೋಟಿ ರೂ. ನಷ್ಟವುಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಸದ್ಯ ಕದಂಬ ಸಾರಿಗೆಯ 150 ಬಸ್‌ಗಳು ಮಾತ್ರ ಓಡಾಟ ನಡೆಸುತ್ತಿವೆ. ಹೊರ ರಾಜ್ಯಗಳಿಗೆ ಬಸ್‌ ಗಳು ಓಡಾಟ ನಡೆಸುತ್ತಿಲ್ಲ. ಕಳೆದ ಸುಮಾರು ಮೂರುವರೆ ತಿಂಗಳಿಂದ ಕದಂಬ ಸಾರಿಗೆಯು ಅಂತಾರಾಜ್ಯಗಳಿಗೆ ಬಸ್‌ ಸಂಚಾರ ಬಂದ್‌ ಮಾಡಿದೆ. ಲಾಕ್‌ಡೌನ್‌ಗೂ ಮುನ್ನ ಪ್ರತಿ ತಿಂಗಳು ಕದಂಬ ಸಾರಿಗೆಗೆ ಒಂಭತ್ತುವರೆ ಕೋಟಿ ಉತ್ಪನ್ನ ಲಭಿಸುತ್ತಿತ್ತು. ಇದು ಸದ್ಯ ಒಂದೂವರೆ ಕೋಟಿ ರೂ. ಗೆ ಬಂದು ನಿಂತಿದೆ ಎಂದು ಕದಂಬ ಮಹಾಮಂಡಳದಿಂದ ಮಾಹಿತಿ ಲಭ್ಯವಾಗಿದೆ.

ಲಾಕ್‌ಡೌನ್‌ಗೂ ಮುನ್ನ ದಿನವೊಂದಕ್ಕೆ ಕದಂಬ ಬಸ್‌ಗಳು ಒಂದು ಲಕ್ಷ ಕಿಮೀ ಓಡಾಟ ನಡೆಸುತ್ತಿದ್ದವು. ಆದರೆ ಸದ್ಯ ಸುಮಾರು 25,000 ಕಿ.ಮೀ ಓಡಾಟ ನಡೆಸುತ್ತಿವೆ. ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಸದ್ಯ ಹೆಚ್ಚಿನ ಜನರು ಸ್ವಂತ ವಾಹನಗಳಲ್ಲಿಯೇ ಓಡಾಟ ನಡೆಸುತ್ತಿದ್ದು, ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆಗೂ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next