ಟೋಕಿಯೊ: 276 ಕೆಜಿ ತೂಕದ ದೈತ್ಯ ಮೀನೊಂದು ಬರೋಬ್ಬರಿ 11 ಕೋಟಿ ರೂಪಾಯಿಗಳಿಗೆ (1.3 ಮಿಲಿಯನ್ ಡಾಲರ್) ಹರಾಜಾಗಿದೆ ಹೌದು ಇದು ಹರಾಜಾಗಿರುವುದು ಜಪಾನ್‌ನಲ್ಲಿ.
ಹೊಸ ವರ್ಷದ ಆರಂಭದಲ್ಲೇ ಜಪಾನ್ ಮೀನುಗಾರರ ಬಲೆಗೆ ದೈತ್ಯ ಮೀನೊಂದು ಬಿದ್ದಿದೆ ಇದರ ಭಾರ ಬರೋಬ್ಬರಿ 276 ಕೆಜಿ, ಈ ಮೀನಿನ ಹೆಸರು ಬ್ಲೂಫಿನ್ ಟ್ಯೂನ ( bluefin tuna), ಈ ಮೀನನ್ನು ಟೋಕಿಯೊದಲ್ಲಿನ ಮೀನು ಮಾರುಕಟ್ಟೆಯಲ್ಲಿ ಹರಾಜು ಹಾಕಲಾಗಿದ್ದು ಅದರಂತೆ ಒನೊಡೆರಾ ಗ್ರೂಪ್ ಇದನ್ನು ಬರೋಬ್ಬರಿ 11 ಕೋಟಿ ರೂಪಾಯಿ ನೀಡಿ ಹರಾಜು ತನ್ನದಾಗಿಸಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ಒನೊಡೆರಾ ಗ್ರೂಪ್ ಟ್ಯೂನ ಮೀನುಗಳನ್ನು ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಖರೀದಿಸುತ್ತಿದೆ. ಕಳೆದ ವರ್ಷ ಒನೊಡೆರಾ ಗ್ರೂಪ್ 6.2 ಕೋಟಿ ರೂ. ನೀಡಿ ಟ್ಯೂನ ಮೀನನ್ನು ಖರೀದಿಸಿತ್ತು.
2019ರಲ್ಲಿ ಟೋಕಿಯೋ ಮೀನು ಮಾರುಕಟ್ಟೆಯಲ್ಲಿ 278 ಕೆಜಿ ತೂಕದ ಬ್ಲೂಫಿನ್ ಟ್ಯೂನ ಮೀನನ್ನು ಬರೋಬ್ಬರಿ 18.19 ಕೋಟಿ ರೂಪಾಯಿಗಳಿಗೆ ಹರಾಜು ಹಾಕಲಾಗಿತ್ತು. ಈ ಸಮಯದಲ್ಲಿ ನಡೆದ ಹರಾಜಿನಲ್ಲಿ ಸುಶಿ ಶುನ್ಮೈ ನ್ಯಾಷನಲ್ ರೆಸ್ಟೊರೆಂಟ್ ನ ಮಾಲೀಕ ಕಿಯೋಶಿ ಕಿಮುರಾ ಚುರಾ ಈ ಮೀನನ್ನು ಖರೀದಿಸಿದ್ದರು.