Advertisement

Mumbai: ಫ್ರಾನ್ಸ್‌ನಿಂದ ಸುರಕ್ಷಿತವಾಗಿ ಮುಂಬೈಗೆ ಬಂದ 276 ಮಂದಿ ಭಾರತೀಯರು

08:54 PM Dec 26, 2023 | Pranav MS |

ಮುಂಬೈ: ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಶಂಕೆ ಗುರಿಯಾಗಿದ್ದ 303 ಭಾರತೀಯರ ಪೈಕಿ 276 ಮಂದಿ ಪ್ರಯಾಣಿಕರು ಮಂಗಳವಾರ ಮುಂಬೈಗೆ ವಾಪಸಾಗಿದ್ದಾರೆ. ಇಬ್ಬರು ಅಪ್ರಾಪ್ತರು ಸೇರಿದಂತೆ 25 ಮಂದಿ ಫ್ರಾನ್ಸ್‌ನಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಅವರು ಆ ದೇಶದಲ್ಲಿಯೇ ಆಶ್ರಯ ಕೋರಿ ಮುಂದಿನ ಪ್ರಕ್ರಿಯೆ ನಡೆಸಲು ಉದ್ಯುಕ್ತರಾಗಿದ್ದಾರೆ.

Advertisement

ಈ ನಡುವೆ ಮುಂಬೈಗೆ ಬಂದಿಳಿದ 276 ಮಂದಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂಬ ಅಂಶವೂ ದೃಢಪಟ್ಟಿದೆ. ಅವರಿಗೆ ವಸತಿ ಮತ್ತು ಮುಂದಿನ ಪ್ರಯಾಣಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ರೊಮೇನಿಯಾದ ಲೆಜೆಂಡ್‌ ಏರ್‌ಲೈನ್ಸ್‌ನ ವಿಮಾನದಲ್ಲಿ 303 ಮಂದಿ ಕಳೆದ ಗುರುವಾರ ದುಬೈನಿಂದ ನಿಕರಾಗುವಾಕ್ಕೆ ತೆರಳುತ್ತಿದ್ದರು. ಅಮೆರಿಕಕ್ಕೆ ನಿಕರಾಗುವ ಮೂಲಕ ಪ್ರವೇಶ ಮಾಡಿ ಆಶ್ರಯ ಕೋರಲು ಸುಲಭದ ದಾರಿ ಇದೆ. ಪ್ರಸಕ್ತ ವರ್ಷವೇ 96, 917 ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶ ಮಾಡಿದ್ದಾರೆ. 2022ಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಅದರ ಪ್ರಮಾಣ ಶೇ.51.61 ಆಗಿದೆ ಎಂದು ಅಮೆರಿಕದ ಗಡಿ ಮತ್ತು ಕಸ್ಟಮ್ಸ್‌ ಇಲಾಖೆ ಹೇಳಿದೆ. ಮೆಕ್ಸಿಕೋ ಗಡಿ ಮೂಲಕ 41,770 ಮಂದಿ ಅಮೆರಿಕ ಪ್ರವೇಶಿಸಲು ಯತ್ನಿಸಿದ್ದಾರೆ ಎಂಬ ಅಂಶವನ್ನೂ ಅಮೆರಿಕ ಪತ್ತೆ ಹಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next