Advertisement

ಎರಡೂ ಮುಕ್ಕಾಲು ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಮಕ್ಕಳು

03:48 PM Mar 24, 2018 | Team Udayavani |

ಶಾಲೆ ಮತ್ತು ಮನೆಯ ನಡುವೆ ಮಕ್ಕಳು ದಿನದ ಬಹುಪಾಲು ಸಮಯವನ್ನು ಕಳೆದುಬಿಡುತ್ತಾರೆ. ಅದರ ನಡುವೆ ಆಟ, ಪ್ರವಾಸ ಮೋಜು ಮಸ್ತಿಯಲ್ಲಿ ಕಳೆದುಹೋಗಿಬಿಡುತ್ತಾರೆ. ಅಂಥದ್ದರಲ್ಲಿ ಮಾರತ್ತಹಳ್ಳಿಯ ವಿಬ್‌ಗ್ಯೋರ್‌ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಮಕ್ಕಳು, ಅಸಹಾಯಕರಿಗೆ ಸಹಾಯ ಮಾಡುವ ಕೆಲಸಕ್ಕೆ  ನಿಂತುಬಿಟ್ಟಿದ್ದಾರೆ. ಸೀಳುತುಟಿ ಸಮಸ್ಯೆ ಗುಣಪಡಿಸಬಹುದಾದ್ದು. ಆದರೆ ಹಣದ ಕೊರತೆಯಿಂದಲೋ, ತಿಳಿವಳಿಕೆ ಇಲ್ಲದೆಯೋ ಈಗಲೂ ಅನೇಕ ಮಕ್ಕಳು ಈ ಸಮಸ್ಯೆಯಿಂದ ಕೊನೆಯವರೆಗೂ ಬಳಲುತ್ತಾರೆ. ಈ ಸಮಸ್ಯೆಯ ನಿವಾರಣೆಗಾಗಿ ವಿಬ್‌ಗ್ಯಾರ್‌ ಶಾಲೆಯ ಮಕ್ಕಳು 2 ಲಕ್ಷ 83 ಸಾವಿರದಷ್ಟು ಮೊತ್ತವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸುವಲ್ಲಿ ಸಫ‌ಲರಾಗಿದ್ದಾರೆ. 

Advertisement

ಸರ್ಕಾರೇತರ ಸಂಸ್ಥೆ ಅಖೀಲ ಭಾರತ ಮಹಿಳಾ ಸೇವಾ ಸಮಾಜ ಈ ಮಕ್ಕಳಿಗೆ ನೆರವಾಗಿದೆ. ಮಕ್ಕಳು ದೇಣಿಗೆಯನ್ನು ಸಂಗ್ರಹಿಸಿದ್ದು ಕ್ರೌಡ್‌ ಫ‌ಂಡಿಂಗ್‌ ಮೂಲಕ.”ಫ‌ುಯೆಲ್‌ ಎ ಡ್ರೀಮ್‌’ ಎನ್ನುವ ಜಾಲತಾಣ ಅವರಿಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ಬೆಂಗಳೂರಿನಂಥ ಮಹಾನಗರಗಳಲ್ಲಿ ಮಕ್ಕಳು ಸಮಾಜದಲ್ಲಿ ತಮ್ಮ ಕೈಲಾದಷ್ಟು ಬದಲಾವಣೆ ತರುವ ಉದ್ದೇಶದಿಂದ ಕಾರ್ಯಪ್ರವೃತ್ತರಾಗಿರುವುದು ಇತರರಿಗೂ ಸ್ಪೂರ್ತಿಯಾಗಬಲ್ಲುದು

Advertisement

Udayavani is now on Telegram. Click here to join our channel and stay updated with the latest news.

Next