ಇಸ್ಲಾಮಾಬಾದ್ : 2014ರ ಜನವರಿಯಿಂದ ಈ ತನಕ ಅಮೆರಿಕ ಪಾಕಿಸ್ಥಾನದಲ್ಲಿ 409 ಡ್ರೋನ್ ದಾಳಿಗಳನ್ನು ನಡೆಸಿದ್ದು ಇವುಗಳಿಲ್ಲ 2,714 ಮಂದಿ ಹತರಾಗಿದ್ದು 728 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಇಂದು ಶುಕ್ರವಾರ ತಿಳಿಸಿಸದೆ.
ಪಾಕಿಸ್ಥಾನದ ಬಜಾವೂರ್, ಬನ್ನು, ಹಾಂಗು, ಖೈಬರ್, ಕುರ್ರಂ, ಮೊಹ್‌ಮಂದ್, ಉತ್ತರ ವಝೀರಿಸ್ಥಾನ, ನುಷ್ಕಿ, ಒರ್ಕಝಾಯಿ ಮತ್ತು ದಕ್ಷಿಣ ವಝೀರಿಸ್ಥಾನ ಮೊದಲಾದ ಪ್ರದೇಶಗಳಲ್ಲಿ ಅಮೆರಿಕ ಸೇನೆಯು ಡ್ರೋನ್ ದಾಳಿ ನಡೆಸಿದೆ ಎಂದು ಡಾನ್ ದೈನಿಕ ವರದಿ ಮಾಡಿದೆ.
ಅಮೆರಿಕ ಸೇನೆ ನಡೆಸಿರುವ ಅತ್ಯಧಿಕ ಸಂಖ್ಯೆಯ ಡ್ರೋನ್ ದಾಳಿಗಳು 2008ರಿಂದ 2012ರ ವರೆಗಿನ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ ಸರಕಾರದ ಆಡಳಿತಾವಧಿಯಲ್ಲಿ ನಡೆದಿವೆ. ಈ ಅವಧಿಯಲ್ಲಿ ಅಮೆರಿಕ ಸೇನೆ 336 ವಾಯು ದಾಳಿಗಳನ್ನು ನಡೆಸಿದ್ದು 2,282 ಮಂದಿ ಇದರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 658 ಮಂದಿ ಗಾಯಾಳುಗಳಾಗಿದ್ದಾರೆ ಎಂದು ರಾಷ್ಟ್ರೀಯ ಉಗ್ರ ನಿಗ್ರಹ ಪ್ರಾಧಿಕಾರದ (ನ್ಯಾಕ್ಟಾ) ಮೂಲಗಳನ್ನು ಉಲ್ಲೇಖೀಸಿ ಡಾನ್ ವರದಿ ಮಾಡಿದೆ.
2010ರ ಒಂದೇ ವರ್ಷದಲ್ಲಿ 117 ಡ್ರೋನ್ ದಾಳಿಗಳು ನಡೆದು 775 ಮಂದಿ ಹತರಾಗಿ 193 ಮಂದಿ ಗಾಯಗೊಂಡರೆಂದು ಅಧಿಕಾರಿಗಳು ತಿಳಿಸಿದ್ದಾರೆ.
2013ರಂದ 2018ರ ವರೆಗಿನ ಪಿಎಂಎಲ್‌ಎನ್ (ನವಾಜ್ ಷರೀಫ್) ಆಡಳಿತಾವಧಿಯಲ್ಲಿ 65 ಡ್ರೋನ್ ದಾಳಿಗಳು ನಡೆದಿವೆ; 301 ಜನರು ಹತರಾಗಿದ್ದಾರೆ; 70 ಮಂದಿ ಗಾಯಗೊಂಡಿದ್ದಾರೆ.
ಈ ವರ್ಷ 2018ರಲ್ಲಿ ಈ ತನಕ ಕೇವಲ ಎರಡು ಡ್ರೋನ್ ದಾಳಿಗಳು ಮಾತ್ರವೇ ನಡೆದಿದ್ದು ಇವುಗಳಲ್ಲಿ ಒಬ್ಬ ಮೃತಪಟ್ಟ ಇನ್ನೊಬ್ಬ ಗಾಯಗೊಂಡಿದ್ದಾನೆ ಎಂದು ಡಾನ್ ವರದಿ ತಿಳಿಸಿದೆ.