ನಗರದಾದ್ಯಂತ 2,700 ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಿದೆ.
Advertisement
ತ್ಯಾಜ್ಯ ವಿಂಗಡಣೆ ಹಾಗೂ ಸ್ವತ್ಛತೆ ಕಾಪಾಡುವಂತೆ ನಾಗರಿಕರಿಗೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ದಿನೇ ದಿನೆ ನಗರದಲ್ಲಿ ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ವಾರ್ಡ್‌ಗೆ 10 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಜತೆಗೆ ಕ್ಯಾಮೆರಾಗಳ ಅಳವಡಿಕೆಗಾಗಿ ಸರ್ಕಾರದ ವಿಶೇಷ
ಅನುದಾನ ಬರಲಿದ್ದು, ಅದನ್ನು ಬಳಸಿ ನಗರದ ಪ್ರಮುಖ 2,700 ಕಡೆಗಳಲ್ಲಿ ಕ್ಯಾಮೆರಾಗಳ ಅಳವಡಿಕೆಗೆ ಯೋಜನೆ
ರೂಪಿಸಿ ಟೆಂಡರ್ ಆಹ್ವಾನಿಸಲಾಗಿದೆ. ಅಪರಾಧ ಚಟುವಟಿಕೆಗಳಿಗೂ ಕಡಿವಾಣ: ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ನಗರದ ಸ್ವತ್ಛತೆ ಹಾಳು ಮಾಡುವವರ
ವಿರುದ್ಧ ಕ್ರಮಕೈಗೊಳ್ಳುವುದು ಒಂದೆಡೆಯಾದರೆ, ನಗರದಲ್ಲಿನ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೂ
ಸಿಸಿಟಿವಿ ಕ್ಯಾಮೆರಾಗಳು ಸಹಕಾರಿಯಾಗಲಿವೆ. ಪಾಲಿಕೆಯಿಂದ ಅಳವಡಿಸುವ ಕ್ಯಾಮೆರಾಗಳಲ್ಲಿನ
ದೃಶ್ಯಾವಳಿಗಳು, ವಿವಿಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಹಿಡಿಯಲು ಪೊಲೀಸರಿಗೆ ಸಹಾಯವಾಗಲಿವೆ.
Related Articles
ದೃಶ್ಯಾವಳಿಗಳ ಪರಿಶೀಲನೆ ಕಾರ್ಯಕ್ಕಾಗಿ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನೂತನ ನಿಯಂತ್ರಣ ಕೊಠಡಿ
(ಕಂಟ್ರೋಲ್ ರೂಂ) ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ನಿಯಂತ್ರಣಕೊಠಡಿಯಲ್ಲಿ ಕುಳಿತು ಸಿಸಿಟಿವಿ
ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಿರುವ ಪಾಲಿಕೆಯ ಸಿಬ್ಬಂದಿ, ಎಲ್ಲೆಂದರಲ್ಲಿ ಕಸ ಎಸೆಯುವ
ನಾಗರಿಕರು, ಕಸಕ್ಕೆ ಬೆಂಕಿ ಹಚ್ಚುವವರು, ಅನುಮತಿಯಿಲ್ಲದೆ ರಸ್ತೆ ಅಗೆಯುವುದು ಸೇರಿ ಇನ್ನಿತರ
ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸಂಬಂಧಪಟ್ಟ
ವಾರ್ಡ್ ಅಥವಾ ವಲಯ ಅಧಿಕಾರಿಗಳಿಗೆ ರವಾನಿಸಿ ಕ್ರಮಕೈಗೊಳ್ಳುವಂತೆ ಸೂಚಿಸಲಿದ್ದಾರೆ ಎಂದು ಪಾಲಿಕೆ
ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಸುಳ್ಳು ಮಾಹಿತಿ ನೀಡಿದ ಅಧಿಕಾರಿಯ ತರಾಟ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿದ್ದುಕೊಂಡು ಸುಳ್ಳು ಮಾಹಿತಿ ನೀಡಿದವಿಶೇಷ ಆಯುಕ್ತರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಪಾಲಿಕೆಯಲ್ಲಿ ನಡೆಯಿತು. ಸಮಿತಿಯ ವತಿಯಿಂದ ಬುಧವಾರ ಕರೆಯಲಾಗಿದ್ದ ಅಧಿಕಾರಿಗಳ ಸಭೆಗೆ ಆಡಳಿತ ವಿಭಾಗದ ವಿಶೇಷ ಆಯುಕ್ತೆ ಸಾವಿತ್ರಿ ಅವರು ಗೈರಾಗಿದ್ದರು. ಸಮಿತಿಯ ಅಧ್ಯಕ್ಷರು ಕರೆ ಮಾಡಿ ವಿಚಾರಿಸಿದಾಗ ಕೆಲಸ ನಿಮಿತ್ತ ತಾವು
ಹೈಕೋರ್ಟ್‌ನಲ್ಲಿರುವುದಾಗಿ ಸಬೂಬು ನೀಡಿದ್ದಾರೆ. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಕೇಂದ್ರ ಕಚೇರಿಯ ಡಿಸಿಯವರ ಕಚೇರಿಗೆ ಭೇಟಿ ನೀಡಿದಾಗ ಅವರು ಕಚೇರಿಯಲ್ಲಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಸಿಟ್ಟಿಗೆದ್ದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಹಾಗೂ ಸಮಿತಿಯ ಸದಸ್ಯರು ಸಾವಿತ್ರಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ನಾವೇನು ನಮ್ಮ ಸ್ವಂತ ಕೆಲಸಗಳಿಗಾಗಿ ಸಭೆ ಕರೆದಿದ್ದೇವೆಯೇ, ಸಾರ್ವಜನಿಕರಿಗೆ ಸುಲಭವಾಗಿ ಆಡಳಿತ ನೀಡುವ ಉದ್ದೇಶದಿಂದ ಹಲವು ಯೋಜನೆಗಳ ಕುರಿತು ಚರ್ಚಿಸಿದರೆ ಬರಲು ನಿಮಗೇನು
ತೊಂದರೆ. ಕಚೇರಿಯಲ್ಲಿದ್ದುಕೊಂಡು ಸುಳ್ಳು ಹೇಳುತ್ತೀರಾ ಜನಪ್ರತಿನಿಧಿಗಳನ್ನು ಏನೆಂದು ತಿಳಿದುಕೊಂಡಿದ್ದೀರಾ ಎಂದು ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡರು.