Advertisement

ಚೀನದಲ್ಲಿ ಬಸ್ ಪಲ್ಟಿಯಾಗಿ 27 ಜನ ಸಾವು, ಹಲವರಿಗೆ ಗಾಯ

02:21 PM Sep 18, 2022 | Team Udayavani |

ಬೀಜಿಂಗ್: ನೈಋತ್ಯ ಚೀನದಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಬಸ್ ಪಲ್ಟಿಯಾಗಿ 27 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಗುಯಿಝೌ ಪ್ರಾಂತ್ಯದ ರಾಜಧಾನಿ ಗುಯಾಂಗ್ ನಗರದ ಆಗ್ನೇಯ ಭಾಗದಲ್ಲಿರುವ ಸಂಡು ಕೌಂಟಿಯಲ್ಲಿ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಅಮಾನತುಲ್ಲಾ ಖಾನ್ ಬೆಂಬಲಿಗರಿಂದ ಎಸಿಬಿ ಅಧಿಕಾರಿಯ ಮೇಲೆ ಹಲ್ಲೆ

ಬಸ್ ನಲ್ಲಿ 47 ಮಂದಿ ಪ್ರಯಾಣಿಸುತ್ತಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಯಾವುದೇ ಮಾಹಿತಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next