Advertisement

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

12:50 AM Dec 19, 2024 | Team Udayavani |

ಬೆಳಗಾವಿ: ಕರ್ನಾಟಕ ಪವರ್‌ ಕಾರ್ಪೋರೇಷನ್‌ನಲ್ಲಿ 260 ಕೋಟಿ ರೂ.ಗಳ ಅಕ್ರಮವಾಗಿದ್ದು, ಈ ಬಗ್ಗೆ ಚರ್ಚಿ
ಸಲು ಛಲವಾದಿ ನಾರಾಯಣಸ್ವಾಮಿ ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದರು.

Advertisement

ಬುಧವಾರ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ,
ಅವರು ಆಡಳಿತಾತ್ಕಕ ಕಾರಣಗಳಿಂದ ಈ ನಿಲುವಳಿ ಸೂಚನೆ ತಿರಸ್ಕರಿಸುತ್ತಿರುವುದಾಗಿ ಪ್ರಕಟಿಸಿದರು. ಆದರೆ ಇದನ್ನು ಆಕ್ಷೇಪಿಸಿದ ಛಲವಾದಿ ನಾರಾಯಣಸ್ವಾಮಿ, 120 ಕೋಟಿ ರೂ.ಗಳ ಟೆಂಡರನ್ನು 4 ತುಂಡು ಗುತ್ತಿಗೆಯನ್ನಾಗಿ ಮತ್ತು 140 ಕೋಟಿ ರೂ.ಗಳ ಇನ್ನೊಂದು ಟೆಂಡರನ್ನು 4 ತುಂಡು ಗುತ್ತಿಗೆಯನ್ನಾಗಿ ವಿಭಾಗಿಸಿ ಒಂದೇ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ.

ಈ ಬಗ್ಗೆ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆದರೆ, ಸಭಾಪತಿ ಅವರು ಪೀಠ ಒಮ್ಮೆ ತೀರ್ಮಾನಿಸಿದ ಬಳಿಕ ಅದನ್ನು ಬದಲಾಯಿಸುವುದಿಲ್ಲ. ನೀವು ಬೇರೆ ಸ್ವರೂಪದಲ್ಲಿ ಚರ್ಚೆಗೆ ಅವಕಾಶ ಕೋರಿ ಮನವಿ ಮಾಡಿದರೆ ಪರಿಶೀಲಿಸಲಾಗುವುದು ಎಂದರು. ಗುರುವಾರ ನಿಯಮ 330ರಡಿ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next