Advertisement

Viral: ಪ್ರಿಯಕರನ ಜೊತೆ ಲವ್ವಿಡವ್ವಿ ವೇಳೆ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿ.. ಮುಂದೆ ಆದದ್ದು

04:49 PM Aug 04, 2024 | Team Udayavani |

ಪಾಟ್ನಾ: ಮದುವೆಯ ಬಳಿಕವೂ ಪ್ರಿಯಕರನನ್ನು ರಹಸ್ಯವಾಗಿ ಆಗಾಗ ಭೇಟಿ ಆಗುತ್ತಿದ್ದ ಮಹಿಳೆ ಪತಿ ಕುಟುಂಬದವರ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುವ ಘಟನೆ ಬಿಹಾರದ ರಾಮನಗರ ಗ್ರಾಮದಲ್ಲಿ ನಡೆದಿದೆ.

Advertisement

ರಾಜೇಶ್ ಕುಮಾರ್ ಅವರ ಪತ್ನಿ ಖುಷ್ಬೂ ಮದುವೆ ಆದ ಬಳಿಕವೂ ತನ್ನ ಪ್ರಿಯಕರನೊಂದಿಗೆ ಅನೋನ್ಯವಾಗಿದ್ದಳು. ಇಬ್ಬರು ಕದ್ದುಮುಚ್ಚಿ ರಾತ್ರಿಯ ವೇಳೆ ಭೇಟಿ ಆಗುತ್ತಿದ್ದರು. ಇತ್ತೀಚೆಗೆ ಖುಷ್ಬೂ ತನ್ನ ಪ್ರಿಯಕರ ಚಂದನ್‌ ನನ್ನು ಭೇಟಿ ಆಗಲು ರಾತ್ರಿಯ ವೇಳೆ ಮನೆಯ ಹೊರಗಡೆ ಬಂದಾಗ ರಾಜೇಶ್‌ ಕುಮಾರ್‌ ಮನೆಯವರು ಇಬ್ಬರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ.

ಈ ವಿಚಾರ ಗ್ರಾಮದಲ್ಲೆಡೆ ಗೊತ್ತಾಗಿ ರಾದ್ಧಾಂತವಾಗಿದೆ. ಆದರೆ ಪತಿ ರಾಜೇಶ್‌ ಕುಮಾರ್‌ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಒಂದುಗೂಡಿಸಲು ನೋಡಿದ್ದಾರೆ. ಇಬ್ಬರನ್ನು ಮದುವೆ ಮದುವೆ ಮಾಡಿಸಲು ಹೊರಟಿದ್ದಾರೆ. ಸ್ಥಳೀಯ ದೇವಸ್ಥಾನದಲ್ಲಿ ಗ್ರಾಮಸ್ಥರ ಮುಂದೆ ಮದುವೆಯನ್ನು ಮಾಡಿಸಿ, ಪತ್ನಿಗೆ ವಿದಾಯ ಹೇಳಿದ್ದಾರೆ.

“ನಾನು ರಾಜೇಶ್‌ ಅವರ ಈ ಸಹಕಾರಕ್ಕೆ ತುಂಬಾ ಖುಷಿಯಾಗಿದ್ದೇನೆ. ನಾನೀಗ ನನ್ನ ಪತಿಯೊಂದಿಗೆ ಹೊಸ ಮನೆಯಲ್ಲಿರಲಿದ್ದೇನೆ. ನನ್ನ ಮಗುವನ್ನು ರಾಜೇಶ್‌ ಮನೆಯಲ್ಲೇ  ಬಿಡಲಿದ್ದೇನೆ. ನನ್ನ ಅತ್ತೆ – ಮಾವನವರು ಮೊಮ್ಮಗನನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಬಯಸಿದ್ದಾರೆ. ಹಾಗಾಗಿ ಮಗುವನ್ನು ಅಲ್ಲೇ ಬಿಟ್ಟಿದ್ದೇನೆ” ಎಂದು ಖುಷ್ಬೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next