Advertisement

ಕೇರಳ ಮಳೆಗೆ 26 ಸಾವು

06:00 AM Aug 10, 2018 | Team Udayavani |

ತಿರುವನಂತಪುರ: ಕೇರಳದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ಹಾಗೂ ಭೂಕುಸಿತಕ್ಕೆ 24 ಗಂಟೆಗಳಲ್ಲಿ 26 ಮಂದಿ ಅಸುನೀಗಿದ್ದಾರೆ. ಜತೆಗೆ ರಾಜ್ಯದಲ್ಲಿರುವ 22 ಅಣೆಕಟ್ಟುಗಳು ತುಂಬಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. 
ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ 17 ಮಂದಿ ಅಸುನೀಗಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಐವರು ಸೇರಿದ್ದಾರೆ.  

Advertisement

ಸಿಎಂ ಸಭೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿರುವನಂತಪುರದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಭೂಸೇನೆ, ನೌಕಾ ಪಡೆ ಮತ್ತು ಐಎಎಎಫ್ನ ನೆರವು ಪಡೆದುಕೊಳ್ಳಲಾಗು ತ್ತದೆ ಎಂದು ಹೇಳಿದ್ದಾರೆ. ಜತೆಗೆ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವ ಹಣಾ ಪಡೆ) ನೆರವೂ ಕೇಳಲಾಗಿದೆ ಎಂದಿದ್ದಾರೆ. ಈಗಾಗಲೇ ಕಲ್ಲಿಕೋಟೆಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ನೌಕಾಪಡೆಯು ಡೈವರ್‌ಗಳ ನಾಲ್ಕು ತಂಡವನ್ನು ಕಳುಹಿಸಿದೆ. ಕಣ್ಣೂರು, ಪಾಲಕ್ಕಾಡ್‌, ವಯನಾಡ್‌ ಜಿಲ್ಲೆಗಳಲ್ಲಿ ಮನೆಗಳು, ಕಚೇರಿಗಳು ಜಲಾವೃತವಾಗಿವೆ.  

ಮುಂದೂಡಿಕೆ: ಮಳೆ, ಪ್ರವಾಹದ ಹಿನ್ನೆಲೆಯಲ್ಲಿ ಆಲಪ್ಪುಳ ಜಿಲ್ಲೆಯ ಪುನ್ನಂಬಳ ಕೆರೆಯಲ್ಲಿ ಆ.11ರಂದು ನಡೆಯಬೇಕಾಗಿದ್ದ ವಾರ್ಷಿಕ ನೆಹರೂ ಟ್ರೋಫಿ ದೋಣಿ ಪಂದ್ಯವನ್ನು ಮುಂದೂಡಲಾಗಿದೆ. ಜತೆಗೆ, ಇಡುಕ್ಕಿ, ಕೊಲ್ಲಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಮೀನುಗಾರರಿಗೆ ಶೋಧ: ಕೊಚ್ಚಿಯ ಮುನಾಂಬಂ ಬಂದರಿ ನಿಂದ 24 ನಾಟಿಕಲ್‌ ಮೈಲು ದೂರದಲ್ಲಿ ನಾಪತ್ತೆಯಾಗಿರುವ 9 ಮೀನುಗಾರರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ನೌಕಾ ಪಡೆ ಮತ್ತು ಕೋಸ್ಟ್‌ ಗಾರ್ಡ್‌ ಈ ಕಾರ್ಯದಲ್ಲಿ ನಿರತವಾಗಿವೆ. ಮಂಗಳವಾರ 14 ಮಂದಿ ಇದ್ದ ದೋಣಿಗೆ ಹಡಗು ಡಿಕ್ಕಿ ಹೊಡೆದು 9 ಮಂದಿ ಮೀನುಗಾರರು ನಾಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಮೂವರು ಸಾವಿಗೀಡಾಗಿದ್ದರು. ಬುಧವಾರ ನಡೆದಿದ್ದ ಶೋಧ ಕಾರ್ಯಾಚರಣೆಯಲ್ಲಿ “ಅಲ್‌ ಮಾ ರಹಾನ್‌’ ಎಂಬ ದೋಣಿಯ ಪಳೆಯುಳಿಕೆ ಪತ್ತೆಯಾಗಿತ್ತು.

26 ವರ್ಷಗಳ ಬಳಿಕ ಕ್ರೆಸ್ಟ್‌ಗೇಟ್‌ ಓಪನ್‌
26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಡುಕ್ಕಿಯ ಜಲಾಶಯದಲ್ಲಿ ನೀರು ತುಂಬಿ ದ್ದ ರಿಂದ ಚೆರುತ್ತೋನಿ ಅಣೆಕಟ್ಟಿನ ಕ್ರೆಸ್ಟ್‌ಗೇಟ್‌ಗಳ ನ್ನು ತೆರೆಯಲಾಗಿದೆ. ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾಗಿರುವ ಕಮಾನು ಅಣೆಕಟ್ಟು ಇದಾಗಿದೆ. ಗುರುವಾರ ಇದರ ನೀರಿನ ಮಟ್ಟ 2,398. 98 ಅಡಿ ಇತ್ತು. ಪೂರ್ಣ ಪ್ರಮಾಣ 2,403 ಅಡಿ ಆಗಿದೆ. ಪೆರಿಯಾರ್‌ ನದಿಗೆ ಎರ್ನಾಕುಲಂ ಜಿಲ್ಲೆಯ ಇಡಮಲಯಾರ್‌ನಲ್ಲಿ ಕಟ್ಟಲಾಗಿರುವ ಅಣೆಕ ಟ್ಟಿನ ನಾಲ್ಕು ಕ್ರೆಸ್ಟ್‌ಗೇಟ್‌ಗಳನ್ನು ತೆರೆಯಲಾಗಿದೆ. ಹೀಗಾಗಿ, ನದಿಯ ಕೆಳ ಭಾಗದಲ್ಲಿರುವ ಪ್ರದೇಶಗಳು ಜಲಾವೃತವಾಗಿದೆ. ಮುಂಜಾಗ ರೂಕತಾ ಕ್ರಮವಾಗಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next