Advertisement

ಮುಂಬೈ ಸೋಂಕಿತನ 26 ಸಂಪರ್ಕಿತರ ವರದಿ ನೆಗೆಟಿವ್‌

05:26 AM Jun 16, 2020 | Lakshmi GovindaRaj |

ಚಾಮರಾಜನಗರ: ಮಹಾರಾಷ್ಟ್ರದ ಮುಂಬೈ ಮೂಲದ ಕೋವಿಡ್‌ ಸೋಂಕು ದೃಢೀಕೃತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮೂವರು ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ 23 ಜನರು ಸೇರಿದಂತೆ ಒಟ್ಟು 26 ಜನರ ಗಂಟಲಿನ ದ್ರವ ಮಾದರಿಯ ಪರೀಕ್ಷಾ ವರದಿಯು ನೆಗೆಟಿವ್‌ ಬಂದಿದೆ.

Advertisement

ಸೋಂಕು ದೃಢೀಕೃತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಒಟ್ಟು 26 ಜನರ ವರದಿಯು ನೆಗೆಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ಕ್ವಾರೆಂಟೈನ್‌ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ, ಮುಂಬೈನಿಂದ ಬಂದಿದ್ದ ಸೋಂಕಿತನ ಜೊತೆಯಲ್ಲಿದ್ದ ಉಳಿದವರಿಗೆ ಸೋಂಕು ಹರಡಿರಬಹುದೆಂಬ ಆತಂಕ ದೂರವಾಗಿದೆ.

ಸೋಂಕಿತನ ಸೋದರಮಾವ ಸ್ಥಳೀಯರಾಗಿದ್ದರು. ಅವರ ವರದಿ ನೆಗೆಟಿವ್‌ ಬಂದಿದೆ. ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಬಂದಿರುವ 38 ಜನರನ್ನು ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವಿವಿಧ ಹಾಸ್ಟೆಲ್‌ ಗಳಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ  ಪಡುವ ಅಗತ್ಯವಿಲ್ಲ.

ಪ್ರಸ್ತುತ ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದ ಕ್ವಾರೆಂಟೈನ್‌ ಕೇಂದ್ರದಲ್ಲಿ ಯಾರನ್ನೂ ನಿಗಾವಣೆ ಮಾಡಲಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next