Advertisement
ಪ್ರಕ್ಷುಬ್ಧಗೊಳ್ಳುವುದು ಸಾಮಾನ್ಯ. ಆದರೆ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರು ಇದಾವುದನ್ನೂ ಗಮನಿಸಿದೆ ನೇರವಾಗಿ ಸಮುದ್ರದಲ್ಲಿ ಈಜಾಟಕ್ಕಿಳಿಯುತ್ತಾರೆ. ಇದು ಅತ್ಯಂತ ಅಪಾಯಕಾರಿ. ಬೀಚ್‌ಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಹಾಗೂ ಸಮುದ್ರಕ್ಕಿಳಿಯದಂತೆ ಎಚ್ಚರಿಸಲು ಗೃಹರಕ್ಷಕ ಸಿಬಂದಿ ನೇಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಗೃಹರಕ್ಷಕ ಇಲಾಖೆ ತಯಾರಿ ನಡೆಸಿದೆ.
Related Articles
Advertisement
ಪ್ರಕೃತಿ ವಿಕೋಪ ಸಂದರ್ಭ ರಕ್ಷಣೆಗೆ ಎರಡು ಬೋಟ್‌ಗಳನ್ನು ಸ್ಥಳೀಯವಾಗಿ ಬಳಕೆಗೆ ಮೀಸಲಿಟ್ಟುಕೊಂಡಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನ, ಸೂಚನೆಯಂತೆ ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಪ್ರಕ್ಷುಬ್ಧ ಸಮುದ್ರದ ಮಾಹಿತಿ ಹಾಗೂ ನೀರಿಗೆ ಇಳಿಯದಂತೆ ಕ್ರಮ ಕೈಗೊಳ್ಳಲು 16 ಮಂದಿ ಪರಿಣಿತ ಗೃಹರಕ್ಷಕ ಸಿಬಂದಿಯನ್ನು ನಿಯೋಜಿಸಲಾಗುವುದು ಎಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ| ಮುರಳಿ ಮೋಹನ್ ಚೂಂತಾರು ತಿಳಿಸಿದ್ದಾರೆ.
ಉಡುಪಿಯಲ್ಲಿ 10 ಸಿಬಂದಿಉಡುಪಿಯ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷೆಗೆ ವಿಶೇಷ ಗಮನ ಹರಿಸಲಾಗಿದೆ. ಮಲ್ಪೆ, ಸೈಂಟ್ ಮೇರಿಸ್ ದ್ವೀಪದಲ್ಲಿ ತಲಾ ಇಬ್ಬರು, ಕಾಪು, ಪಡುಬಿದ್ರಿ, ಪಡುಕೆರೆ, ಮರವಂತೆಯಲ್ಲಿ ಜಿಲ್ಲೆಯ ಪ್ರಮುಖ ಬೀಚ್‌ನಲ್ಲಿ ತಲಾ ಇಬ್ಬರಂತೆ ಒಟ್ಟು 10 ಗೃಹರಕ್ಷಕ ಸಿಬಂದಿ ನಿಯೋಜನೆ ಮಾಡಲಾಗಿದೆ. ಮಳೆಗಾಲದ ವಿಶೇಷ ಸುರಕ್ಷೆಗಾಗಿ ಜೂನ್ ಮೊದಲ ವಾರದ ಅನಂತರದಲ್ಲಿ ಕರಾವಳಿ ಕಾವಲು ಪಡೆ ಮೂಲಕ ಹೆಚ್ಚುವರಿ ಸಿಬಂದಿ ನಿಯೋಜನೆ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು. ಅವರು ಉದಯವಾಣಿಗೆ ಮಾಹಿತಿ ನೀಡಿದರು.