Advertisement

ಕ್ಷೇತ್ರ ಅಭಿವೃದ್ಧಿಗೆ 26.50 ಕೋಟಿ ಮಂಜೂರು

11:39 AM Sep 15, 2019 | Suhan S |

ಹಿರೇಕೆರೂರ: ಹಿರೇಕೆರೂರ ವಿಧಾನ ಸಭಾ ಕ್ಷೇತ್ರದ ವಿವಿಧ ರಸ್ತೆಗಳ ಸುಧಾರಣೆಗಾಗಿ ಸರ್ಕಾರದಿಂದ 26.50 ಕೋಟಿ ರೂ. ಮಂಜೂರಾಗಿದೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ ತಿಳಿಸಿದರು.

Advertisement

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20 ಸಾಲಿನ 3054 ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮಂಜೂರಾದ 8.25 ಕೋಟಿ ರೂ.ಅನುದಾನದಲ್ಲಿ ತಾಲೂಕಿನ ಮೇದೂರು ಕಣವಿಶಿದ್ದಗೇರಿ ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ., ಚನ್ನಳ್ಳಿ ದೂದಿಹಳ್ಳಿ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ., ದೊಡ್ಡಗುಬ್ಬಿ ಯಡಗೋಡ ರಸ್ತೆ ಅಭಿವೃದ್ಧಿಗೆ 55 ಲಕ್ಷ ರೂ., ಬುಳ್ಳಾಪುರ ಕಿರಗೇರಿ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ., ಚಿಕ್ಕೇರೂರ ಯಲ್ಲಾಪುರ ರಸ್ತೆಯಿಂದ ಹಾರೋಮುಚಡಿ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ., ಕಡೂರು ಕಣವಿಶಿದ್ದಗೇರಿ ರಸ್ತೆ ಅಭಿವೃದ್ಧಿಗೆ 28 ಲಕ್ಷ ರೂ., ಕೂಲಿ ಕುಡಪಲಿ ಬಡಾಸಂಗಾಪುರ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ., ಹಿರೇಮತ್ತೂರ ಗಂಗಾಪುರ ರಸ್ತೆ ಅಭಿವೃದ್ಧಿಗೆ 66 ಲಕ್ಷ ರೂ., ಹಿರೇಕೆರೂರ- ಹಂಸಭಾವಿ ರಸ್ತೆಯಿಂದ ಆರೀಕಟ್ಟಿ ರಸ್ತೆ ಅಭಿವೃದ್ಧಿಗೆ 46 ಲಕ್ಷ ರೂ., ಹಳೇನಿಡನೇಗಿಲು-ಹೊಸನೀಡನೇಗಿಲು ರಸ್ತೆ ಅಭಿವೃದ್ಧಿಗೆ 26 ಲಕ್ಷ ರೂ., ಹಿರೇಕೆರೂರ-ಹಂಸಭಾವಿ ರಸ್ತೆಯಿಂದ ಬೆಟಕೇರೂರ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ., ಹಿರೇಕೆರೂರ-ಕೋಡ ರಸ್ತೆಯಿಂದ ನೂಲಗೇರಿ ರಸ್ತೆ ಅಭಿವೃದ್ಧಿಗೆ 1.09 ಕೋಟಿ ರೂ.

ತಾಲೂಕಿನ ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿಗೆ ಮಂಜೂರಾದ 16.25 ಕೋಟಿ ರೂ., ಅನುದಾನದಲ್ಲಿ ತಾಲೂಕಿನ ಮಾವಿನತೋಪ, ನೇಶ್ವಿ‌ ಬತ್ತಿಕೊಪ್ಪ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ಅಣಜಿ ಕಮಲಾಪುರ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ., ವರಹ ನೀಡನೇಗಿಲು ತಿಪ್ಪಾಯಿಕೊಪ್ಪ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ., ಹಿರೇಕೆರೂರ ಕೋಡ ವಾಯಾ ಅಬಲೂರು ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ಹಿರೇಕೊಣತಿ ಮಡ್ಲೂರ ರಸ್ತೆ ಅಭಿವೃದ್ಧಿಗೆ 1.25 ಕೋಟಿ ರೂ., ಹೊಸಕಟ್ಟಿ ಹೊನ್ನಾಳಿ ರಸ್ತೆ ಅಭಿವೃದ್ಧಿಗೆ 3.5 ಕೋಟಿ ರೂ., ದೂದಿಹಳ್ಳಿ ರಟ್ಟೀಹಳ್ಳಿ ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ., ಮಂಜೂರಾಗಿದೆ. ಮತ್ತು ಹಿರೇಕೆರೂರ ಪಟ್ಟಣದ ತಿಪ್ಪನಶೆಟ್ಟಿ ಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಡಿಸಲು ನಗರಾಭಿವೃದ್ಧಿ ಇಲಾಖೆಯಿಂದ 2 ಕೋಟಿ ರೂ. ಸೇರಿದಂತೆ ಒಟ್ಟು 26.50 ಕೋಟಿ ರೂ.ಅನುದಾನ ಆರ್ಥಿಕ ಇಲಾಖೆಯಿಂದ ಮಂಜೂರಾತಿ ದೊರಕಿದೆ ಎಂದು ತಿಳಿಸಿದರು.

ಡಿ.ಸಿ.ಪಾಟೀಲ, ಆರ್‌.ಎನ್‌.ಗಂಗೋಳ, ಪ್ರಕಾಶಗೌಡ ಗೌಡರ್‌, ಅಲ್ತಾಫ್‌ಖಾನ್‌ ಪಠಾಣ್‌, ಪೀರ್‌ಅಹ್ಮದ್‌ ಬೇವಿನಹಳ್ಳಿ, ಅಶೋಕ ಜಾಡಬಂಡಿ, ಗುರುಶಾಂತ ಎತ್ತಿನಹಳ್ಳಿ, ಬಸವರಾಜ ಕಟ್ಟಮನಿ, ಬಸವರಾಜ ಭರಮಗೌಡ್ರ, ರಮೇಶ ಹಡಗದ, ಬಸವರಾಜ ಕಾಲ್ವೀಹಳ್ಳಿ, ಅಬ್ದುಲ್ಖಾದರ್‌ ಲೋಹಾರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next