Advertisement

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

04:22 PM Nov 17, 2024 | Team Udayavani |

ದೇವರ ಚಿತ್ರವನ್ನು ಕಮರ್ಷಿಯಲ್‌ ಅಂಶದೊಂದಿಗೆ ಮಾಸ್‌ ಆಗಿ ಕುರಿತ ಸಿನಿಮಾ ತೋರಿಸಿರುವ ಚಿತ್ರ “ಸಿಂಹರೂಪಿಣಿ’ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇದರನ್ವಯ ಸಿನಿಮಾಕ್ಕೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಸ್ಮರಣಿಕೆ ವಿತರಿಸುವ ಕಾರ್ಯಕ್ರಮವನ್ನು “ಸ್ವಪ್ನ’ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀಚಕ್ರ ಫಿಲಂಸ್‌ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. “ಕೆಜಿಎಫ್’, “ಸಲಾರ್‌’, “ಭೈರತಿ ರಣಗಲ್’ ಮುಂತಾದ ಹಿಟ್‌ ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುವ ಕಿನ್ನಾಳಾ ರಾಜ್‌ ಚಿತ್ರಕಥೆ, ಸಾಹಿತ್ಯ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು,ಚಿತ್ರ ಮಾಡಲು ಯೋಗ, ಯೋಗ್ಯತೆ ಅದಕ್ಕಿಂತ ಹೆಚ್ಚಾಗಿ ಅದೃಷ್ಟ ಕೂಡಿಬರಬೇಕು. ಇವೆಲ್ಲವು ನಮಗೆ ಸಿಕ್ಕಿದೆ. ಎಲ್ಲಾ ಕಲಾವಿದರು ಕಥೆ ಕೇಳಿದೊಡನೆ ಯಾವಾಗ ಬರಲಿ ಅಂತ ಹೇಳುತ್ತಿದ್ದರು. ಎಲ್ಲರೂ ಭಕ್ತಿಯಿಂದ, ಇಷ್ಟದಿಂದ ಮಾಡಿದ್ದಾರೆ. ವ್ಯವಹಾರಿಕವಾಗಿ ನಿರ್ಮಾಪಕರು ಸೇಫ್ ಆಗಿದ್ದಾರೆ. ಮಾಧ್ಯಮದ ಸಹಕಾರ ಮರೆಯುವಂತಿಲ್ಲ. ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಕೋಣ ಏಕೆ ಕಡಿಯುತ್ತಾರೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದೀರಾ. ಸೆಕೆಂಡ್‌ ಆಫ್ ಕಾಂತಾರ ಚಿತ್ರ ಮೀರಿಸುವಂ ತಿತ್ತು. ಭಕ್ತಿ ಕಥೆಗೆ ಸಿಂಹರೂಪಿಣಿ ಸಾಕ್ಷಿಯಾಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಒಂಬತ್ತು ತಿಂಗಳ ಶ್ರಮ ಸಾರ್ಥಕ ಅನಿಸಿದೆ. ಬ್ಯಾಂಕಾಕ್‌ ಫಿಲಂ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಲಭಿಸಿದ್ದು ಖುಷಿ ವಿಷಯ. ಭಾಗ-2 ಮಾಡುವ ಯೋಜನೆ ಇದ್ದು, ಮುಂದಿನ ವಾರದಿಂದಲೇ ಉತ್ತರ ಕರ್ನಾಟಕ ಹಾಗೂ ರಾಜ್ಯಾದ್ಯಂತ ಜನರಿಗೆ ತಲುಪಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next