ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘನೆಗೆ ಸಂಬಂಧಿಸಿದಂತೆ ಇಂದು(ಸೋಮವಾರ, ಮೇ 10) 259 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : 3ನೇ ಅಲೆ ಎದುರಿಸಲು ಹಳ್ಳಿ ಹಂತದಲ್ಲೇ 8,105 ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಸರಕಾರ ನಿರ್ಧಾರ
ಮಾಸ್ಕ್ ಧರಿಸದೇ ಇದ್ದಂತಹ 591 ಜನರ ವಿರುದ್ಧ ಕೇಸ್ ದಾಖಲಿಸಿ 78,600 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ರಾಜ್ಯದಾದ್ಯಂತ ಇಂದಿನಿಂದ (ಸೋಮವಾರ) ಪ್ರಾರಂಭವಾದ ಎರಡನೇ ಹಂತದ ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ನಗರದ ವಿವಿಧ ಪ್ರಮುಖ ವೃತ್ತ, ರಸ್ತೆಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರು. ರಾಜ್ಯ ಸರ್ಕಾರ ಕೋವಿಡ್ ಕರ್ಫ್ಯೂ ನಿಯಮ ಜಾರಿಯಲ್ಲಿದ್ದರೂ ಹಲವು ಸಾರ್ವಜನಕರು ವಾಹನಗಳೊಂದಿಗೆ ರಸ್ತೆಗಿಳಿದಿದ್ದವರಿಗೆ ದಂಡ ವಿಧಿಸಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು, ಜಿಲ್ಲೆಯ ಕೆಲವು ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ತಹಶಿಲ್ದಾರ್ ಬಿ.ಎನ್. ಗಿರೀಶ್, ಮೇಯರ್ ಎಸ್.ಟಿ. ವೀರೇಶ್ ಜಯದೇವ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿದರು. ರಸ್ತೆಗೆ ಇಳಿದ ವಾಹನ ಸವಾರರ ಪರಿಶೀಲಸಿ, ಸಕಾರಣ ಇಲ್ಲದ ವಾಹನ ವಶಪಡಿಸಿಕೊಂಡರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಕೈ ಮುಗಿದು ಹೊರಗೆ ಅಡ್ಡಾಡದಂತೆ ಮನವಿ ಮಾಡಿಕೊಂಡರು.
ಇದನ್ನೂ ಓದಿ : 5 ವರ್ಷಗಳ ಹಿಂದೆ “ಕೋವಿಡ್” ಬಗ್ಗೆ ಚರ್ಚೆ ನಡೆಸಿದ್ದರು ಚೀನಾ ವಿಜ್ಞಾನಿಗಳು..! : ವರದಿ