ಮಂಡ್ಯ: ಜಿಲ್ಲೆಯಲ್ಲಿ ಗುರುವಾರ ದಾಖಲೆಯ 254 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದರೆ, 197 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಎರಡು ಸಾವು: ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದು, ಇದರಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 51ಕ್ಕೇರಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ 28 ವರ್ಷದ ಮಹಿಳೆ ಹಾಗೂ ಮಂಡ್ಯ ತಾಲೂಕಿನ 80 ವರ್ಷದ ವೃದ್ಧೆ ಕೋವಿಡ್ ದಿಂದ ಮೃತಪಟ್ಟಿದ್ದಾರೆ. ಮಹಿಳೆಗೆ ಉಸಿರಾಟದ ತೊಂದರೆ ಇತ್ತು. ವೃದ್ಧೆಗೆ ನ್ಯುಮೋನಿಯಾ, ಜ್ವರ, ಉಸಿರಾಟ ತೊಂದರೆ ಜೊತೆಗೆ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
197 ಮಂದಿಗೆ ಸೋಂಕು: ಗುರುವಾರ 197 ಮಂದಿಗೆ ಸೋಂಕು ಆವರಿಸಿದೆ. ಮಂಡ್ಯದ 62 ಪ್ರಕರಣಗಳ ಪೈಕಿ 54 ಸಂಪರ್ಕಿತ, 8 ಐಎಲ್‌ಐ, ಮದ್ದೂರು 19 ಸೋಂಕಿತರ ಪೈಕಿ 18 ಸಂಪರ್ಕಿತ, 1 ಐಎಲ್‌ಐ, ಮಳವಳ್ಳಿ 25 ಪ್ರಕರಣಗಳಲ್ಲಿ 20 ಸಂಪರ್ಕಿತ, 5 ಐಎಲ್‌ಐ, ಪಾಂಡವಪುರದ 19 ಮಂದಿಯಲ್ಲಿ 15 ಸಂಪರ್ಕಿತ, 4 ಐಎಲ್‌ಐ, ಶ್ರೀರಂಗಪಟ್ಟಣದ 30 ಮಂದಿಯ ಪೈಕಿ 20 ಸಂಪರ್ಕಿತ, 10 ಐಎಲ್‌ಐ, ಕೆ.ಆರ್.ಪೇಟೆ 36 ಪ್ರಕರಣಗಳಲ್ಲಿ 29 ಸಂಪರ್ಕಿತ, 7 ಐಎಲ್‌ಐ, ನಾಗಮಂಗಲದ 6 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ಸುತ್ತಿಕೊಂಡಿದೆ.
ಮಂಡ್ಯ ಜಿಲ್ಲಾಸ್ಪತ್ರೆ ಐಸೋಲೇಷನ್‌ನಲ್ಲಿ 275, ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ನಲ್ಲಿ 62, ತಾಲೂಕು ಆಸ್ಪತ್ರೆಯ ಐಸೋಲೇಷನ್‌ನಲ್ಲಿ 261, ತಾಲೂಕು ಕೋವಿಡ್ ಕೇರ್ ಸೆಂಟರ್‌ನಲ್ಲಿ 272, ಖಾಸಗಿ ಆಸ್ಪತ್ರೆಯ ಐಸೋಲೇಷನ್‌ನಲ್ಲಿ 84 ಹಾಗೂ ಹೋಂ ಐಸೋಲೇಷನ್‌ನಲ್ಲಿ 465 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
254 ಕೋವಿಡ್ ದಿಂದ ಮುಕ್ತ: ಒಂದೇ ದಿನ ಬರೋಬ್ಬರಿ ದಾಖಲೆಯ 254 ಮಂದಿ ಕೋವಿಡ್ ದಿಂದ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಮಂಡ್ಯ 187, ಮದ್ದೂರು 9, ಮಳವಳ್ಳಿ 5, ಪಾಂಡವಪುರ 4, ಶ್ರೀರಂಗಪಟ್ಟಣ 10, ಕೆ.ಆರ್.ಪೇಟೆ 15, ನಾಗಮಂಗಲ 24 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 4725 ಪ್ರಕರಣಗಳಲ್ಲಿ 3254 ಮಂದಿ ಬಿಡುಗಡೆಯಾಗಿದ್ದು, 1419 ಸಕ್ರಿಯ ಪ್ರಕರಣಗಳಿವೆ.