Advertisement

ದಿನಕ್ಕೆ 25 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ

12:21 AM Oct 08, 2021 | Team Udayavani |

ತಿರುವನಂತಪುರ: ಮಂಡಲ-ಮಕರವಿಳಕ್ಕು ಮೂಲಕ ನವೆಂಬರ್‌ 16ರಿಂದ ಕೇರಳದ ಪ್ರಸಿದ್ಧ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಆರಂಭಿಕ ದಿನಗಳಲ್ಲಿ ಪ್ರತೀ ದಿನ 25 ಸಾವಿರ ಭಕ್ತಾದಿಗಳಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

Advertisement

ಮುಜರಾಯಿ ಇಲಾಖೆ, ಸಾರಿಗೆ, ಅರಣ್ಯ, ಆರೋಗ್ಯ ಸೇರಿ ಅನೇಕ  ಸಚಿವರೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ನಿತ್ಯ 25 ಸಾವಿರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರಲಿದೆ. ಆವಶ್ಯಕತೆ ಇದ್ದರೆ ಚರ್ಚೆ ನಡೆಸಿ, ಸಂಖ್ಯೆಯಲ್ಲಿ ಬದಲಾವಣೆ ತರಲಾಗುವುದು ಎಂದೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅಯ್ಯಪ್ಪನ ದರ್ಶನಕ್ಕೆ ಬರುವವರಿಗೆ ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆಯಾಗಿರಬೇಕು ಅಥವಾ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯಿರಬೇಕು. ಹಾಗೆಯೇ ಇನ್ನೂ ಹಲವು ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next