Advertisement

ಮಲೇಷಿಯಾ:ಧಾರ್ಮಿಕ ಸಂಸ್ಥೆಯಲ್ಲಿ ಬೆಂಕಿ;25 ವಿದ್ಯಾರ್ಥಿಗಳು ಬಲಿ

08:55 AM Sep 14, 2017 | |

ಕೌಲಾಲಂಪುರ: ಮಲೇಷಿಯಾದ ರಾಜಧಾನಿಯಲ್ಲಿರುವ ಧಾರ್ಮಿಕ ಸಂಸ್ಥೆಯೊಂದರಲ್ಲಿ ಗುರುವಾರ ಬೆಳಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿ 25 ಮಂದಿ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

Advertisement

ತಹಫೀಝ್ ದಾರುಲ್‌ ಕುರಾನ್‌ ಇತ್ತಿಫ‌ಖೀಯಾ ಸಂಸ್ಥೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 23 ವಿದ್ಯಾರ್ಥಿಗಳು ಮತ್ತು ಇಬ್ಬರು ವಾರ್ಡನ್‌ಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಹೆಚ್ಚಿನವರು ಮಲಗಿದ್ದ ವೇಳೆಯಲ್ಲೇ ಹೊಗೆ ಸುತ್ತಿಕೊಂಡು , ಇನ್ನು ಕೆಲವರು ಹೊರಗೆ ಬರಲಾರದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬಂದಿಗಳು ಬೆಂಕಿ ನಂದಿಸಿದ್ದಾರೆ. ಸರ್ಕಾರ ದುರಂತದ ಬಗ್ಗೆ ತನಿಖೆಗೆ ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next