Advertisement

25 ಮಂದಿ ಎನ್ನಾರೈಗಳ ಪಾಸ್‌ಪೋರ್ಟ್‌ ರದ್ದು

07:27 AM Nov 17, 2018 | |

ಹೊಸದಿಲ್ಲಿ: ತಮ್ಮ ಪತ್ನಿಯರನ್ನು ಭಾರತದಲ್ಲೇ ಬಿಟ್ಟು ವಿದೇಶದಲ್ಲಿ ನೆಲೆಸಿರುವ 25 ಪರಿತ್ಯಕ್ತ ಪುರುಷರ ಪಾಸ್‌ಪೋರ್ಟ್‌ಗಳನ್ನು ಸರಕಾರ ರದ್ದು ಪಡಿಸಿದೆ. ಈ ಪೈಕಿ 8 ಮಂದಿಯ ಪಾಸ್‌ಪೋರ್ಟ್‌ಗಳನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ನಿರ್ದೇಶನದ ಮೇರೆಗೆ ರದ್ದು ಪಡಿಸಲಾಗಿದ್ದರೆ, ಉಳಿದವನ್ನು ಆಯಾ ರಾಜ್ಯಗಳ ಪೊಲೀಸರ ಕೋರಿಕೆ ಮೇರೆಗೆ ರದ್ದು ಮಾಡಲಾಗಿವೆ ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತ್ನಿಯರನ್ನು ಪರಿತ್ಯಕ್ತಗೊಳಿಸಿ ವಿದೇಶಗಳಲ್ಲಿ ಹೋಗಿ ನೆಲೆಸಿರುವ ಪುರುಷರ ವಿರುದ್ಧ ದೂರುಗಳನ್ನು ನಾವು ಸ್ವೀಕರಿಸುತ್ತಲೇ ಇರುತ್ತೇವೆ. ಈ ಬಾರಿ ಪಾನ್ಪೋರ್ಟ್‌ಗಳ ರದ್ದು ಮಾಡಿರುವುದಲ್ಲದೇ, ಕೆಲವು ಪ್ರಕರಣಗಳಲ್ಲಿ ಪೊಲೀಸರು ಲುಕ್‌ ಔಟ್‌ ನೋಟಿಸ್‌ಗಳನ್ನು ಕೂಡ ಜಾರಿ ಮಾಡಿದ್ದಾರೆ. ಆದ್ಯತೆ ಮೇರೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next