ಬೆಂಗಳೂರು: ಪ್ರೇಮಿಗಳ ದಿನಾಚರಣೆ ಪರೋಕ್ಷವಾಗಿ ಸಣ್ಣ ಪ್ರಮಾಣದ ಆರ್ಥಿಕ ಚೇತರಿಕೆಗೂ ಕಾರಣವಾಗಿದೆ. ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಹೂ ವ್ಯಾಪಾರಿಗಳು ಹಾಗೂ ಫ್ಯಾನ್ಸಿ ಮಳಿಗೆಗಳ ಮಾಲೀಕರು ಪ್ರೇಮಿಗಳ ದಿನಾಚರಣೆಯ ಆಗಿರುವ ವಹಿವಾಟಿನಿಂದ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದಾರೆ.
ನಗರದ ಹೆಬ್ಟಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು(ಐಎಫ್ಎಬಿ) ಕೇಂದ್ರದಲ್ಲೂ ದಾಖಲೆಯ ಪ್ರಮಾಣದ ಗುಲಾಬಿ ವಹಿವಾಟು ನಡೆದಿದೆ. ಐಎಫ್ ಎಬಿಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 25 ಲಕ್ಷಕ್ಕೂ ಹೆಚ್ಚು ಗುಲಾಬಿ ಹೂ ಮಾರಾಟವಾಗಿದೆ.
ಇದನ್ನೂ ಓದಿ:ಕೇಳಿದ್ದು “ಕಲ್ಚರ್’, ಆದದ್ದು “ಅಗ್ರಿ’, ಕೊಟ್ಟದ್ದು “ಅಗ್ರಿಕಲ್ಚರ್’
ಈ ವಾರದಲ್ಲಿ ಒಂದು ಗುಲಾಬಿ ಹೂ ಗರಿಷ್ಠ 26ರೂ.ಗೆ ಹರಾಜಾಗಿದ್ದೂ ಇದೆ. ಕಳೆದ ಬಾರಿ ಒಂದು ಗುಲಾಬಿ ಹೂವಿಗೆ 8ರಿಂದ 10ರೂ. ಇತ್ತು. ಈ ಬಾರಿ ಕನಿಷ್ಠ 12ರೂ. ಇದೆ. ಮಾರುಕಟ್ಟೆಯಲ್ಲಿ 40ರಿಂದ 42 ರೂ ಇದೆ. ಪ್ರತಿ ವರ್ಷವೂ ಗುಲಾಬಿ ಮಾರಾಟದಲ್ಲಿ ಶೇ.20ರಷ್ಟು ಪ್ರಗತಿ ಇರುತ್ತಿತ್ತು.
ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಗುಲಾಬಿ ಮಾರಾಟ ಜೋರಾಗಿ ನಡೆಯುತ್ತಿತ್ತು. ಆದರೆ, ಈ ಬಾರಿ ಗುಲಾಬಿ ವಹಿವಾಟು ಸುಧಾರಿಸಿಕೊಂಡಿದೆ. ಒಟ್ಟಾರೆ ಗುಲಾಬಿ ಬೆಳೆದ ರೈತರಿಗೆ ಕನಿಷ್ಠ ಲಾಭವಾಗಿದೆ ಎಂದು ಐಎಫ್ ಎಬಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ:ಚಿತ್ರಮಂದಿರಗಳು ಬೆಸ್ಕಾಂ ಬಿಲ್ ಕಟ್ಟಲೂ ಪರದಾಟ