ಕೊಚ್ಚಿ : ಅಳುವಾ ಸಮೀಪದ ಇಡಯಾರ್ ಎಂಬಲ್ಲಿ ಕಾರೊಂದರಿಂದ ಸುಮಾರು ಆರು ಕೋಟಿ ರೂ. ಮೌಲ್ಯ ದ 25 ಕಿಲೋ ಚಿನ್ನವನ್ನು ಬೈಕಿನಲ್ಲಿ ಬಂದ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಕಳವು ಮಾಡಿರುವುದಾಗಿ ಪೊಲೀಸರು ಇಂದು ಶುಕ್ರವಾರ ತಿಳಿಸಿದ್ದಾರೆ.
ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಕಾರನ್ನು ಅಡ್ಡಗಟ್ಟಿ ಕಿಟಕಿ ಗಾಜನ್ನುಒಡೆದು, ಒಳಗಿದ್ದವರ ಮೇಲೆ ದಾಳಿ ಮಾಡಿ ಕಾರಿನಲ್ಲಿದ್ದ 25 ಕಿಲೋ ಚಿನ್ನವನ್ನು ಕದ್ದೊಯ್ದರು.
ಈ ಚಿನ್ನವನ್ನು ಖಾಸಗಿ ರಿಫೈನಿಂಗ್ ಸಂಸ್ಥೆಯೊಂದಕ್ಕೆ ಕಾರಿನಲ್ಲಿ ಒಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಗುರುವಾರ ರಾತ್ರಿ 10 ಗಂಟೆಯ ಸುಮಾರಿಗೆ ಬಿನಾನಿಪುರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಇಡಯಾರ್ ರಿಫೈನಿಂಗ್ ಕಂಪೆನಿಯ ಸಮೀಪವೇ ನಡು ರಸ್ತೆಯಲ್ಲಿ ನಡೆಯಿತು ಎಂದು ಪೊಲಿಸರು ತಿಳಿಸಿದ್ದಾರೆ.
ಕಳ್ಳರ ದಾಳಿಯಲ್ಲಿ ಕಾರಿನಲ್ಲಿದ್ದವರ ಪೈಕಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.