Advertisement

ಕಂಟೈನ್ಮೆಂಟ್‌ಗೆ ಅಂದಾಜು 25 ಕೋಟಿ ಖರ್ಚು!

11:34 AM Aug 18, 2020 | Suhan S |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ದೃಢಪಟ್ಟ ಪ್ರದೇಶಗಳನ್ನು ಕಂಟೈನ್ಮೆಂಟ್‌ ಮಾಡುವುದಕ್ಕೆ ಅಂದಾಜು 20- 25 ಕೋಟಿ ರೂ. ವೆಚ್ಚವಾಗಿರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳಿದ್ದಾರೆ.

Advertisement

ಈ ಮೂಲಕ ಕಂಟೈನ್ಮೆಂಟ್‌ ಪ್ರದೇಶಗಳ ನಿರ್ಮಾಣದಲ್ಲಿ ನಿರೀಕ್ಷೆಗೂ ಮೀರಿದ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯ ಬಗ್ಗೆ ಖುದ್ದು ಆಯುಕ್ತರೇ ಸುಳಿವು ನೀಡಿದ್ದಾರೆ. ಕಂಟೈನ್ಮೆಂಟ್‌ ಅವ್ಯವಹಾರದ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜರಾಜೇಶ್ವರಿ ವಲಯದಲ್ಲಿ ಕಳೆದ ಎರಡುವರೆ ತಿಂಗಳಲ್ಲಿ (ಜೂನ್‌, ಜುಲೈ ಹಾಗೂ ಆಗಸ್ಟ್‌) ಅಂದಾಜು 1.50 ಕೋಟಿ ರೂ. ಕಂಟೈನ್ಮೆಂಟ್‌ಗೆ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಪ್ರತಿ ವಲಯದಲ್ಲೂ 1.50ರಿಂದ 2 ಕೋಟಿರೂ. ಕಂಟೈನ್ಮೆಂಟ್‌ ನಿರ್ಮಾಣಕ್ಕೆಂದೇ ವೆಚ್ಚವಾಗಿದಲ್ಲಿ ಅಥವಾ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿಯೂ ನಿಗದಿ ಮಾಡಿದ್ದಲ್ಲಿ ಪಾಲಿಕೆಯಿಂದ ಅಂದಾಜು 20ರಿಂದ 25 ಕೋಟಿರೂ.ವೆಚ್ಚವಾಗಿರುವ ಸಾಧ್ಯತೆ ಇದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಕೆಲವು ಸಹಾಯಕ ಎಂಜಿನಿಯರ್‌ ಗಳು ಕಂಟೈನ್ಮೆಂಟ್‌ ಮಾಡುವುದಕ್ಕೆ ಬೇಕಾದ ಶೀಲ್ಡ್‌ ಹಾಗೂ ಮರದ ಕಂಬಗಳನ್ನು ಎಸ್‌ಆರ್‌ ದರದಲ್ಲಿ ಖರೀದಿಸಿ, ಅದನ್ನೇ ಒಂದು ಸ್ಥಳದಿಂದ ಮತ್ತೂಂದು ಸ್ಥಳದಲ್ಲಿ ಪುನರ್ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ ಕಂಟೈನ್ಮೆಂಟ್‌ ಪದ್ಧತಿ ಜಾರಿಯಾದಾಗಿನಿಂದ ಯಾವರೀತಿ ಕೊಟೇಷನ್‌ ಕೊಡಲಾಗಿದೆ. ಇದಕ್ಕಾಗಿ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಪೂರ್ಣ ವಿವರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರಿನಲ್ಲಿ ಈವರೆಗೆ ಒಟ್ಟು 34,326 ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿವೆ. ಅದರಲ್ಲಿ 19,559 ಕಂಟೈನ್ಮೆಂಟ್‌ ಪ್ರದೇಶ ಸೋಂಕು ಮುಕ್ತವಾಗಿದ್ದು, ಇನ್ನೂ 14,767 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ತಿಳಿಸಿದರು.

ಹಣ ಬಿಡುಗಡೆ ಮಾಡದಂತೆ ಆದೇಶ :  ಕಂಟೈನ್ಮೆಂಟ್‌ ನಿರ್ಮಾಣ ಮಾಡುವ ಸಂದರ್ಭದಲ್ಲಿ ವ್ಯತ್ಯಾಸ ಮೊತ್ತ ತಾಳೆ ಹಾಕಿ ನೋಡಿಲ್ಲ ಮತ್ತು ಕೊಟೇಷನ್‌ ಇಲ್ಲದೆ ಅನುಮೋದನೆ ಆಗಿದೆ ಅಂತಹ ಬಿಲ್‌ಗ‌ಳನ್ನು ಅನುಮೋದನೆ ಮಾಡದಂತೆ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ. ಒಟ್ಟಾರೆ ಕಂಟೈನ್ಮೆಂಟ್‌ ನಿರ್ಮಾಣಕ್ಕೆ ವಲಯವಾರು ವೆಚ್ಚ ಮಾಡಿದ ಮೊತ್ತ ಹಾಗೂ ಬಿಲ್‌ಗ‌ಳ ವಿವರ ನೀಡುವಂತೆ ಎಲ್ಲ ವಲಯದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿಯ ಆಧಾರದ ಮೇಲೆ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next