Advertisement

Smuggling: 25.49 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಯತ್ನ

01:03 AM Nov 10, 2023 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬಾೖನಿಂದ ಆಗಮಿಸಿದ ಪ್ರಯಾಣಿಕನೊಬ್ಬ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ 25,49,400 ರೂ. ಮೌಲ್ಯದ 420 ಗ್ರಾಂ ನಿಲ್ದಾಣದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Advertisement

ನ. 5ರಂದು ದುಬಾೖನಿಂದ ಆಗಮಿಸಿದ ಕೇರಳದ ಕಾಸರಗೋಡು ಮೂಲಕ ಪ್ರಯಾಣಿಕನ ಟ್ರಾಲಿಬ್ಯಾಗನ್ನು ತಪಾಸಣೆಗೆ ಒಳಗೆ ಒಳಪಡಿಸಿದಾಗ ಚಿನ್ನ ಇರುವುದು ಪತ್ತೆಯಾಗಿದೆ. ಟಿಫನಿ ಎಕ್ಲೇರ್ ಹೆಸರಿನ ಚಾಕಲೇಟ್‌ ಪ್ಯಾಕ್‌ನೊಳಗೆ ಸಿಲ್ವರ್‌ ಕಲರ್‌ನ ಪ್ಯಾಕೆಟ್‌ನಲ್ಲಿ 24 ಕ್ಯಾರೆಟ್‌ ಪರಿಶುದ್ಧ ಚಿನ್ನವನ್ನು ಹಳದಿ ಬಣ್ಣದ ಪೌಡರ್‌ ರೂಪದಲ್ಲಿ ಸಾಗಿಸಲು ಯತ್ನಿಸಲಾಗಿತ್ತು. ಪ್ರಯಾಣಿಕನಲ್ಲಿ ಒಟ್ಟು ಇಂತಹ ಏಳು ಚಾಕ್ಲೆಟ್‌ ಪ್ಯಾಕೆಟ್‌ಗಳಿದ್ದವು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದ್ದು, ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next