Advertisement

2021ರ ಸಪ್ಟೆಂಬರ್ ಒಳಗೆ ದೇಶದ 25-30 ಕೋಟಿ ಜನರಿಗೆ ಕೋವಿಡ್ ಲಸಿಕೆ ಸಿಗಲಿದೆ: ಹರ್ಷವರ್ಧನ್

02:55 PM Nov 23, 2020 | keerthan |

ಹೊಸದಿಲ್ಲಿ: ಮುಂದಿನ ವರ್ಷದ ಸಪ್ಟೆಂಬರ್ ಒಳಗೆ ದೇಶದ 25ರಿಂದ 30 ಕೋಟಿ ಜನರಿಗೆ ಕೋವಿಡ್-19 ಲಸಿಕೆ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.

Advertisement

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, 2021ರ ಮೊದಲ ಮೂರು ತಿಂಗಳಲ್ಲಿ ಭಾರತ ಕೋವಿಡ್ ಲಸಿಕೆಯನ್ನು ಪಡೆಯಲಿದೆ. ಸಪ್ಟೆಂಬರ್ ಒಳಗೆ 25ರಿಂದ 30 ಕೋಟಿ ಜನರಿಗೆ ಲಸಿಕೆ ಸಿಗಲಿದೆ ಎಂದು ಹೇಳಿದರು.

ಯಾರು ಮೊದಲು ಲಸಿಕೆ ಪಡೆಯುತ್ತಾರೆ ಎನ್ನುವುದರ ಕುರಿತು ಮಾತನಾಡಿದ ಅವರು, ಆರೋಗ್ಯ ಕಾರ್ಯಕರ್ತರ ದತ್ತಾಂಶಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಅಪ್‌ಲೋಡ್ ಮಾಡಲಾಗುವುದು ಎಂದರು. ಮುಂಚೂಣಿಯ ಕಾರ್ಯಕರ್ತರಾದ ಪೋಲಿಸ್, ಅರೆಸೈನಿಕ, ನೈರ್ಮಲ್ಯೀಕರಣದಲ್ಲಿ ತೊಡಗಿರುವವರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮೊದಲು ಪರಿಗಣಿಸಲಾಗುತ್ತದೆ ಎಂದರು.

ಇದನ್ನೂ ಓದಿ:ಆ್ಯಂಟಿ ಬಯೋಟಿಕ್ ಈ ಶುಂಠಿ! : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಹೊಸದಿಲ್ಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ದಿಲ್ಲಿಯ ಕೆಲವು ವಿದ್ಯಾವಂತ ಜನರ ನಿರ್ಲಕ್ಯವೂ ಇದಕ್ಕೆ ಕಾರಣ. ಆರ್ ಟಿ- ಪಿಸಿಆರ್ ಗಳ ಸಾಮರ್ಥ್ಯ ಹೆಚ್ಚಿಸಲಾಗಿದೆ. ಸಂಚಾರಿ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ನಮ್ಮಿಂದ ಏನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದ್ದೇವೆ ಎಂದು ಹರ್ಷವರ್ಧನ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next