Advertisement

24×7 ಕರೆಂಟ್‌, 24 ಗಂಟೆಯೊಳಗೆ ಸಾಲಮನ್ನಾ

04:53 PM May 06, 2018 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 10 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ಬೃಹತ್‌ ಕೈಗಾರಿಕೆ, ರೈತರ ಬೆಳೆ ಸಂಸ್ಕರಣೆಗೆ ಕೋಲ್ಡ್‌ ಸ್ಟೋರೇಜ್‌, ಎತ್ತಿನಹೊಳೆ ಯೋಜನೆ ತ್ವರಿತ ಗತಿಯಲ್ಲಿ ಪೂರ್ಣ, ಕಾಂಗ್ರೆಸ್‌ ಸರ್ಕಾರ ರೂಪಿಸಿರುವ ಕೊಳಚೆ ನೀರು ಯೋಜನೆಗೆ ಬ್ರೇಕ್‌. ಇದು ಭಾರತೀಯ ಜನತಾ ಪಕ್ಷ ಚಿಕ್ಕಬಳ್ಳಾಪುರ ಜಿಲ್ಲೆಗೆ ರೂಪಿಸಿರುವ ಚುನಾವಣಾ ಪ್ರಣಾಳಿಕೆ. ಶನಿವಾರ ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ಕೇಂದ್ರದ ವಿತ್ತ ಖಾತೆ ರಾಜ್ಯ ಸಚಿವ ಶಿವಪ್ರತಾಪ್‌ ಶುಕ್ಲಾ, ಜಿಲ್ಲೆಗೆ ಹಲವು ಬರಪೂರ ಭರವಸೆಗಳನ್ನು ನೀಡಿದರು.

Advertisement

ಬೆಳಗ್ಗೆ ಉಪಾಹಾರ: ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ. ಗ್ರಾಮೀಣ ರೈತರಿಗೆ ದಿನದ 24 ಗಂಟೆ ತ್ರಿಫೇಸ್‌ ವಿದ್ಯುತ್‌ ಒದಗಿಸುತ್ತೇವೆ. ಬಿಸಿಯೂಟದ ಜೊತೆಗೆ ಸರ್ಕಾರ ಶಾಲೆಗಳಲ್ಲಿ ಬೆಳಗಿನ ಉಪಾಹಾರ ಯೋಜನೆ ಜಾರಿಗೆ ತರುತ್ತೇವೆ. ಜಿಲ್ಲೆಯಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಅನುಮೋದನೆ ಪಡೆದ ಎತ್ತಿನಹೊಳೆ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಕಾಲಮಿತಿಯೊಳಗೆ ಪೂರ್ಣಗೊಳಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ಕೂಡಲೇ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.

ಕಾಂಗ್ರೆಸ್‌ ಅಪಪ್ರಚಾರ: ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದೂ ಕೂಡ ಕೇಂದ್ರದ ಬಳಿ ನಿಯೋಗ ತರಲಿಲ್ಲ. ಆದರೆ, ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ರಾಜ್ಯದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಉತ್ತರ
ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಕೇಂದ್ರದ ನೆರವು ಇಲ್ಲದೇ ರೈತರ ಸಾಲ ಮನ್ನಾ ಮಾಡಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಏಕೆ ಅದು ಸಾಧ್ಯವಾಗಲಿಲ್ಲ?, ಇದು ಕಾಂಗ್ರೆಸ್‌ಗೆ ರೈತರ ಮೇಲಿನ ಕಾಳಜಿಯನ್ನು ತೋರಿಸುತ್ತದೆ ಎಂದು ವಾಗ್ಧಾಳಿ ನಡೆಸಿದರು.
ಕೇಂದ್ರ ಸರ್ಕಾರವು ಜಿಎಸ್‌ಟಿ, ನೋಟ್‌ ಬ್ಯಾನ್‌ ಮೂಲಕ ದೇಶದ ಆರ್ಥಿಕ ಸದೃಢತೆಗೆ ಮುಂದಾಗಿದೆ. ಮುದ್ರಾ ಯೋಜನೆಯಡಿ ದೇಶದಲ್ಲಿ ಲಕ್ಷಾಂತರ ಮಂದಿಗೆ ಸ್ವಾವಲಂಬಿ ಬದುಕಿಗೆ ಆಸರೆ ನೀಡಿದೆ.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಚಾಚೂ ತಪ್ಪದೇ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಲಿದ್ದು, ಭ್ರಷ್ಟ ಹಾಗೂ ದುರಾಡಳಿತ ಕಾಂಗ್ರೆಸ್‌ ಸರ್ಕಾರವನ್ನು ಬದಲಿಸಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕಿ ಗೌರಿಬಿದನೂರಿನ ಎನ್‌.ಜ್ಯೋತಿ ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್‌, ಉಪಾಧ್ಯಕ್ಷೆ ಶೋಭಾ, ಜಿÇÉಾ
ಮಾಧ್ಯಮ ವಕ್ತಾರ ಲಕ್ಷ್ಮೀಪತಿ ಉಪಸ್ಥಿತರಿದ್ದರು.

10 ಸಾವಿರ ಮಂದಿಗೆ ಉದ್ಯೋಗ ಭರವಸೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಜಿಲ್ಲೆಗೆ ರೈತರು ಬೆಳೆಯುವ ತರಕಾರಿ ಮತ್ತಿತರ ಬೆಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೋಲ್ಡ್‌ ಸ್ಟೋರೆಜ್‌, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಕೃಷಿ ಮಾರುಕಟ್ಟೆಯಲ್ಲಿ ಡಿಜಿಟಲ್‌ ಮಾರುಕಟ್ಟೆ ಯನ್ನಾಗಿ ಪರಿವರ್ತಿಸುವುದು, ಕಾಂಗ್ರೆಸ್‌ ಸರ್ಕಾರ ರೂಪಿಸಿರುವ ಸಂಸ್ಕರಿಸಿದ ಕೊಳಚೆ ನೀರಿನ ಯೋಜನೆಯನ್ನು ತಡೆಯುವುದು, ಎತ್ತಿನಹೊಳೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು, ಕೇಂದ್ರ ಸರ್ಕಾರದ ನೆರವಿನಲ್ಲಿ 10 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ಬೃಹತ್‌ ಕೈಗಾರಿಕೆ ಸ್ಥಾಪಿಸ ಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರದ ಕ್ಷೇತ್ರದ ಅಭ್ಯರ್ಥಿ ಡಾ. ಜಿ.ವಿ. ಮಂಜುನಾಥ ತಿಳಿಸಿದರು.

Advertisement

ಆಂಧ್ರ ಮೂಲಕ ಜಿಲ್ಲೆಗೆ ಕುಡಿವ ನೀರು ಮೊದಲಿನಿಂದಲೂ ದೇಶದಲ್ಲಿ ನದಿ ಜೋಡಣೆ ಮಾಡುವ ವಿಚಾರ ಬಿಜೆಪಿ ಪಕ್ಷದ
ಅಜೆಂಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಕನಸಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರಿನ ಸಮಸ್ಯೆಯನ್ನು ನೀಗಿಸಲು ಬಿಜೆಪಿ ಸಾಕಷ್ಟು ಚಿಂತನೆ ನಡೆಸಿದೆ. ಗೋದಾವರಿ  ನದಿ ತಿರುವು ಯೋಜನೆ ಕೈಗೆತ್ತಿಕೊಂಡು ಆಂಧ್ರದ ಮೂಲಕ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರ ಪ್ರಮಾಣಿಕ ಪ್ರಯತ್ನ ನಡೆಸಲಿದೆ. ಅದೇ ರೀತಿ ಜಿಲ್ಲೆಗೆ ಸಮಗ್ರ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಪರಮಶಿವಯ್ಯ ವರದಿ ಬಗ್ಗೆಯು ಬಿಜೆಪಿ ಪರಿಶೀಲಿಸಲಿದೆ ಎಂದು ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಶಿವಪ್ರತಾಪ್‌
ಶುಕ್ಲಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next