Advertisement

ಉತ್ತರಪ್ರದೇಶ,ದೆಹಲಿ,ಕರ್ನಾಟಕ ಸೇರಿ ದೇಶದಲ್ಲಿ 24 ನಕಲಿ ವಿವಿಗಳಿವೆ: ಶಿಕ್ಷಣ ಸಚಿವ ಪ್ರಧಾನ್

11:58 AM Aug 03, 2021 | Team Udayavani |

ನವದೆಹಲಿ: ಸ್ವಯಂ ಘೋಷಿತ ಸುಮಾರು 24 ಯೂನಿರ್ವಸಿಟಿಗಳನ್ನು ನಕಲಿ ಎಂದು ಯುಜಿಸಿ (ಯೂನಿರ್ವಸಿಟಿ ಗ್ರ್ಯಾಂಟ್ಸ್ ಕಮಿಷನ್) ಘೋಷಿಸಿದ್ದು, ಇವುಗಳು ಎರಡಕ್ಕಿಂತಲೂ ಹೆಚ್ಚಿನ ಪ್ರಮಾಣದ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಸಿಬ್ಬಂದಿಗಳ ಸಂಬಳ ಹೆಚ್ಚಳಕ್ಕೆ ಶೇಕಡಾ. 90ರಷ್ಟು ಸಂಬಳವನ್ನು ಕಡಿತಗೊಳಿಸಿಕೊಂಡ ಸಿಇಒ..!

ಲೋಕಸಭಾ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಪ್ರಧಾನ್ ಈ ಲಿಖಿತ ಉತ್ತರದ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಗೂ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮಗಳ ದೂರಿನ ಆಧಾರದ ಮೇಲೆ ಸ್ವಯಂ ಘೋಷಿತ 24 ಯೂನಿರ್ವಸಿಟಿಗಳು ನಕಲಿ ಎಂದು ಯುಜಿಸಿ ಘೋಷಿಸಿದೆ ಎಂದು ವಿವರಿಸಿದ್ದಾರೆ.

ಅಲ್ಲದೇ ಇನ್ನೂ ಎರಡು ವಿವಿಗಳಾದ ಉತ್ತರಪ್ರದೇಶ ಲಕ್ನೋದ ಭಾರತೀಯ ಶಿಕ್ಷಾ ಪರಿಷತ್ ಮತ್ತು ನವದೆಹಲಿಯ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್ ಮೆಂಟ್ (IIPM), ಕುತೂಬ್ ಎನ್ ಕ್ಲೇವ್ ಯುಜಿಸಿ ಕಾಯ್ದೆ 1956ರ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ. ಆದರೆ ಭಾರತೀಯ ಶಿಕ್ಷಾ ಪರಿಷತ್ ಲಕ್ನೋ ಮತ್ತು ಐಐಪಿಎಂ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಇಂತಹ ನಕಲಿ ವಿವಿಗಳಿರುವುದಾಗಿ ವರದಿ ಹೇಳಿದೆ. ಇದರಲ್ಲಿ ವಾರಣಾಸೇಯ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿ, ಮಹಿಳಾ ಗ್ರಾಮ್ ವಿದ್ಯಾಪೀಠ್, ಅಲಹಾಬಾದ್, ಗಾಂಧಿ ಹಿಂದಿ ವಿದ್ಯಾಪೀಠ್ ಅಲಹಾಬಾದ್, ನ್ಯಾಷನಲ್ ಯೂನಿರ್ವಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೊಪತಿ, ಕಾನ್ಪುರ್, ನೇತಾಜಿ ಸುಭಾಶ್ಚಂದ್ರ ಬೋಸ್ ಒಪನ್ ಯೂನಿರ್ವಸಿಟಿ, ಅಲಿಗಢ್, ಉತ್ತರಪ್ರದೇಶ ವಿವಿ, ಮಥುರಾ, ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾಲಯ, ಪ್ರತಾಪ್ ಗಢ್ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್, ನೋಯ್ಡಾ ಸೇರಿರುವುದಾಗಿ ವರದಿ ತಿಳಿಸಿದೆ.

Advertisement

ದೆಹಲಿಯಲ್ಲಿ ಏಳು ನಕಲಿ ವಿವಿಗಳಿದ್ದು, ಕಮರ್ಷಿಯಲ್ ಯೂನಿರ್ವಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿರ್ವಸಿಟಿ, ವೊಕೇಷನಲ್ ಯೂನಿರ್ವಸಿಟಿ, ಎಡಿಆರ್ ಸೆಂಟ್ರಿಕ್ ಜುಡಿಶಿಯಲ್ ಯೂನಿರ್ವಸಿಟಿ, ಎಡಿಆರ್ ಸೆಂಟ್ರಿಕ್ ಜ್ಯುರಿಡಿಕಲ್ ಯೂನಿರ್ವಸಿಟಿ, ಇಂಡಿಯನ್ ಇನ್ಸ್ ಟಿಟ್ಯೂಷನ್ ಆಫ್ ಸೈನ್ ಆ್ಯಂಡ್ ಎಂಜಿನಿಯರಿಂಗ್, ವಿಶ್ವಕರ್ಮ ಒಪನ್ ಯೂನಿರ್ವಸಿಟಿ ಇದರಲ್ಲಿ ಸೇರಿದೆ.

ಒಡಿಶಾ ಮತ್ತು ಪಶ್ಚಿಮಬಂಗಾಳದಲ್ಲಿ ಇಂತಹ ಎರಡು ನಕಲಿ ಯೂನಿರ್ವಸಿಟಿಗಳಿವೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಾಂಡಿಚೇರಿಯಲ್ಲಿ ಇಂತಹ ಒಂದೊಂದು ನಕಲಿ ಯೂನಿರ್ವಸಿಟಿಗಳಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.