Advertisement

24 ಕೆಜಿ ತೂಗುವ ಕುಂಬಳ

08:15 AM Aug 04, 2017 | Harsha Rao |

ಮಡಿಕೇರಿ: ಚೆಟ್ಟಳ್ಳಿಯ ಈರಳೆವಳಮುಡಿ ಗ್ರಾಮದ ಬಲ್ಲಾರಂಡ ಕವನ್‌ ತಿಮ್ಮಯ್ಯ ನವರ ತೋಟದಲ್ಲಿ ಸುಮಾರು 24 ಕೆ.ಜಿ. ತೂಕದ ಭಾರೀ ಗಾತ್ರದ ಸಿಹಿ ಕುಂಬಳ ಕಾಯಿ ಬೆಳೆದು ಆಶ್ಚರ್ಯವನ್ನು ಉಂಟುಮಾಡಿದೆ.

Advertisement

ಕವನ್‌ ಕಾರ್ಯಪ್ಪನವರ ತೋಟದಲ್ಲಿರುವ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಕ್ಕೆಂದು ಇವರಲ್ಲಿಗೆ ಬರುವ ಸಂದರ್ಭ ತಮ್ಮ ಊರಿನಿಂದ ತಂದಿದ್ದ ಸಿಹಿ ಕುಂಬಳಕಾಯಿಯ ಬೀಜ ಹಾಗೂ ಸೋರೆಕಾಯಿಯ ಬೀಜವನ್ನು  ತೋಟದಲ್ಲಿ ಬಿತ್ತಿದ್ದರು.

ಅನಂತರದ ದಿನಗಳಲ್ಲಿ ತೋಟದಲ್ಲಿ ಕುಂಬಳ ಬಳ್ಳಿ ಸುಪ‌ುಷ್ಟವಾಗಿ ಬೆಳೆದು  ಸುಮಾರು ಮೂವತ್ತಕ್ಕೂ ಹೆಚ್ಚಿನ ಕಾಯಿಗಳನ್ನು ಬಿಟ್ಟಿತ್ತು. ಇವುಗಳನ್ನು ಕೊಯ್ದು ಬಳಸಲಾಗಿತ್ತಾದರೆ ಇತ್ತೀಚೆಗೆ  ಬಳ್ಳಿಯಲ್ಲಿದ್ದ ಮೂರು ಕುಂಬಳ ಕಾಯಿಗಳನ್ನು ಹಾಗೆಯೇ ಬೆಳೆಯಲು ಬಿಡಲಾಗಿತ್ತು. ಅದರಲ್ಲಿ ಒಂದು ಬೃಹತ್ತಾಗಿ ಬೆಳೆದು  ಸಾರ್ವಜನಿಕರ ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next