Advertisement

ಕೆಕೆಆರ್‌ಟಿಸಿ ಸಮಸ್ಯೆಗೆ 24 ಗಂಟೆ ಸ್ಪಂದನೆ: ರಾಚಪ್ಪ

01:23 PM Jun 03, 2022 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಮತ್ತು ಕಾರ್ಮಿಕ ವರ್ಗದ ಸಮಸ್ಯೆಗಳಿಗೆ ದಿನದ 24 ಗಂಟೆಯೂ ಮುಕ್ತವಾಗಿ ಚರ್ಚಿಸಿ ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಎಂ. ಭರವಸೆ ನೀಡಿದರು.

Advertisement

ಗುರುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇದಕ್ಕೂ ಮುನ್ನ ಮನವಿ ಸಲ್ಲಿಸಿದ ಕೂಟದ ಗೌರವ ಅಧ್ಯಕ್ಷ ಶೌಕತ್‌ ಅಲಿ ಆಲೂರು, ನಿಗಮದಲ್ಲಿ ಹಲವಾರು ಸಮಸ್ಯೆಗಳಿವೆ. ಅಧಿಕಾರಿಗಳು ಸಿಬ್ಬಂದಿಗೆ ಇನ್ನಿಲ್ಲದಂತೆ ಒತ್ತಡ ಹೇರುತ್ತಾರೆ. ಅಲ್ಲದೇ, ಕೆಲವರಿಗೆ ಅನಗತ್ಯವಾದ ವರ್ಗಾವಣೆ, ವಿಚಾರಣೆಗಳಲ್ಲಿ ಸುಖಾಸುಮ್ಮನೆ ವಿಳಂಬ ಮಾಡಲಾಗುತ್ತಿದೆ. ಅದರೊಂದಿಗೆ ದೈನಂದಿನ ಮೂಲ ಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ತಾವು ಬಂದ ಬಳಿಕಲಾದರೂ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತದೆನ್ನುವ ಆಶಾಭಾವ ಹೊಂದಿದ್ದೇವೆ ಎಂದರು.

ಕೂಟದ ಜಿಲ್ಲಾಧ್ಯಕ ಜಯರಾಮ್‌ ರಾಠೊಡ, ಉಪಾಧ್ಯಕ್ಷ ಸುಭಾಷ ಆಲೂರು, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ತಳವಾರ, ಸಿದ್ಧನಗೌಡ ಪಾಟೀಲ, ಉದಯಕುಮಾರ ಶಿರೂರ, ರುದ್ರಗೌಡ, ಮಲ್ಲಿಕಾರ್ಜುನ ಹಿರೇಮಠ, ಮಹಾದೇವ ಸಂಗಾವಿ, ಶಿವಪುತ್ರ ಪೂಜಾರಿ, ಪ್ರಭು ಲೋಣಿ, ರಾಮಶೆಟ್ಟಿ ಚವ್ಹಾಣ, ಸತೀಶ ದೊಡ್ಡಮನಿ ಇತರರು ಇದ್ದರು.

ನಾನು ಬೆಳವಣಿಗೆ ಮತ್ತು ಪರಿಶ್ರಮದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಆದ್ದರಿಂದ ಎಲ್ಲ ವರ್ಗದ ಸಮಸ್ಯೆಗಳು ನನಗೆ ತಿಳಿಯುತ್ತವೆ. ಎಂಡಿ ಸ್ಥಾನದಲ್ಲಿ ಇದ್ದು ಅವುಗಳನ್ನು ಸಾಧ್ಯವಾದ ರೀತಿಯಲ್ಲಿ ಪರಿಹಾರ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸಿಬ್ಬಂದಿಯೂ ಅಷ್ಟೇ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ರಾಚಪ್ಪ ಎಂ, ಎಂಡಿ, ಕೆಕೆಆರ್ಟಿಸಿ

Advertisement

Udayavani is now on Telegram. Click here to join our channel and stay updated with the latest news.

Next