ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾಗಾಟ ಆಗುವ ದಾಖಲೆಯಿಲ್ಲದ ಹಣಹಾಗೂ ಮೌಲ್ಯಯುತ ವಸ್ತುಗಳ ಪತ್ತೆಗೆ ನೆರವು ನೀಡುವಂತೆ ಐಟಿ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ಪ್ರತ್ಯೇಕ ಕಂಟ್ರೋಲ್ ರೂಂ ಕೂಡ ತೆರೆದಿದೆ. ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಯಾರಾದರೂ ದಾಖಲೆ ಇಲ್ಲದ ಹಣ, ಮೌಲ್ಯಯುತ ವಸ್ತು ತೆಗೆದುಕೊಂಡು ಹೋಗುತ್ತಿದ್ದರೆ ಸಾರ್ವಜನಿಕರೇ ಮಾಹಿತಿ ನೀಡಬಹುದು. ಮಾಹಿತಿಕೊಟ್ಟವರ ವಿವರ ಗೌಪ್ಯವಾಗಿರಲಿದೆ.
ಟೋಲ್ ಫ್ರೀ ಸಂಖ್ಯೆ
ಐಟಿ ಅಧಿಕಾರಿ ಎಚ್.ಎಸ್. ಸುಬ್ಬಣ್ಣ ಕಂಟ್ರೋಲ್ ರೂಂನಲ್ಲಿ ಕಾರ್ಯ ನಿರ್ವ ಹಿಸಲಿದ್ದಾರೆ. ಟೋಲ್ ಫ್ರೀ ನಂಬರ್ 18004252115, ದೂರವಾಣಿ ಸಂಖ್ಯೆ 080 22861126, ಮೊ. 8277422825, 8277413614ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಫ್ಯಾಕ್ಸ್ 080 22866916 ಅಥವಾ ಇ ಮೇಲ್ ವಿಳಾಸ cleankarnatakaelection @incometax.gov.inಗೆ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು
ಐಟಿ ಅಧಿಕಾರಿಗಳು ತಿಳಿಸಿದ್ದಾರೆ.