Advertisement

ವಾಸ್ಕೊ: ಬಿಟ್ಸ್  ಕ್ಯಾಂಪಸ್‍ನಲ್ಲಿ 24 ವಿದ್ಯಾರ್ಥಿಗಳಿಗೆ ಕೋವಿಡ್: ಆತಂಕ ಹೆಚ್ಚಳ

01:52 PM Apr 01, 2022 | Team Udayavani |

ಪಣಜಿ: ವಾಸ್ಕೊ ಜುವಾರಿ ನಗರದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಡೀಮ್ಡ್ ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿ 24 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟವರಲ್ಲಿ  ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಈ ಭಾಗದಲ್ಲಿ ಮತ್ತೆ ಕೋವಿಡ್ ಸೋಂಕು ಹರಡುವ ಭೀತಿ ಎದುರಾಗಿದೆ.

Advertisement

ಈ ಕುರಿತು ರಾಜ್ಯ ಸಾಂಕ್ರಾಮಿಕ ರೋಗ ತಜ್ಞೆ ಡಾ. ಉತ್ಕರ್ಷ ಬೇತೋಡ್ಕರ್ ಮಾಹಿತಿ ನೀಡಿ, ಮಾರ್ಚ 25 ರಂದು ಬಿಟ್ಸ್ ಪಿಲಾನಿ ಕ್ಯಾಂಪಸ್‍ನಲ್ಲಿ ಮೊದಲ ಕೋವಿಡ್ ಸೋಂಕಿತ ಪತ್ತೆಯಾಗಿದ್ದು, ಇದೀಗ ಕ್ಯಾಂಪಸ್‍ನಲ್ಲಿ 24 ಜನರಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರನ್ನು ಪ್ರತ್ಯೇಕ ಕೊಠಡಿಯಲ್ಲಿಡಲಾಗಿದೆ. ಸೋಂಕಿತರಲ್ಲಿ ಯಾರಿಗೂ ಗಂಭೀರ ಪರಿಸ್ಥಿತಿಯಿಲ್ಲ. ಕ್ಯಾಂಪಸ್‍ನಲ್ಲಿ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಪರೀಕ್ಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಬಿಟ್ಸ್ ಪಿಲಾನಿ ಕ್ಯಾಂಪಸ್‍ನಲ್ಲಿ ಕೋವಿಡ್ ಸೋಂಕು ಹರಡುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next