Advertisement
ಕೊರಟಗೆರೆ ಪಟ್ಟಣದ ತಾಪಂ ಮತ್ತು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ 24 ಗ್ರಾಪಂಗಳ ಸ್ವಚ್ಚವಾಹಿನಿ ವಾಹನಗಳ ಲೋಕಾರ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಕಾರ್ಯಕ್ರಮದಲ್ಲಿಜಿಪಂ ಉಪಕಾರ್ಯದರ್ಶಿ ಅಥಿಕ್‌ಪಾಷ, ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ತಾಪಂ ಆಡಳಿತಾಧಿಕಾರಿ ದೀಪಶ್ರೀ, ಪಪಂ ಅಧ್ಯಕ್ಷೆ ಕಾವ್ಯರಮೇಶ್, ಉಪಾಧ್ಯಕ್ಷೆ ಭಾರತಿಸಿದ್ದಮಲ್ಲಪ್ಪ, ಪಪಂ ಮುಖ್ಯಾಧಿಕಾರಿ ಲಕ್ಷö್ಮಣ್, ತಾಪಂ ಇಓ ದೊಡ್ಡಸಿದ್ದಪ್ಪ, ಕೃಷಿ ನಿರ್ದೇಶಕ ನಾಗರಾಜು, ಸಿಡಿಪಿಓ ಅಂಬಿಕಾ, ೨೪ಗ್ರಾಪಂಯ ಪಿಡಿಓ, ಕಾರ್ಯದರ್ಶಿ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಇತರರು ಇದ್ದರು.
ಮಹಿಳಾ ಸದಸ್ಯರಿಂದ ಸ್ವಯಂ ಉದ್ಯೋಗಕೊರಟಗೆರೆ ಕ್ಷೇತ್ರದಲ್ಲಿ 568 ಸ್ತ್ರೀ ಶಕ್ತಿ ಸಂಘದ 11 ಸಾವಿರ ಸದಸ್ಯರು, ೯೬೫ ಸ್ವಸಹಾಯ ಸಂಘದ ೧೧೪೮೬ಜನ ಸದಸ್ಯರು, ೧೬೧೩ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ 32260 ಜನ ಮಹಿಳಾ ಸದಸ್ಯರು ಸೇರಿದಂತೆ ಒಟ್ಟಾರೇ56106 ಜನ ಮಹಿಳಾ ಸದಸ್ಯರು ಸಂಘಗಳ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ವಿಶೇಷ ಹೆಜ್ಜೆಯನ್ನು ಇಟ್ಟಿರುವುದೇ ದೇಶದ ಅಭಿವೃದ್ದಿಯ ಸಂಕೇತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳೆಯರ ಹಬ್ಬವಾದ ಮಾರಾಟ ಮೇಳ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವು ಮಹಿಳೆಯರ ಹಬ್ಬವಾಗಿ ನಿರ್ಮಾಣವಾಗಿತ್ತು. ಕಾರ್ಯಕ್ರಮ ಸುತ್ತಮುತ್ತಲು ನಿರ್ಮಾಣವಾಗಿದ್ದ ೩೦ಕ್ಕೂ ಅಧಿಕ ಮಹಿಳೆಯರ ಸ್ವಯಂ ಉದ್ಯೋಗದ ಅಂಗಡಿ ಮಳಿಗೆಗಳಲ್ಲಿ ವಹಿವಾಟು ನಡೆಯಿತು. ಪ್ರತಿಯೊಂದು ಅಂಗಡಿಗೂ ಮಾಜಿ ಡಿಸಿಎಂ ಭೇಟಿ ನೀಡಿ ಮಾಹಿತಿ ಪಡೆದದ್ದು ಗಮನ ಸೆಳೆಯಿತು.