Advertisement

24 ಪ್ರದೇಶಗಳು ಕಂಟೈನ್ಮೆಂಟ್‌: ಡಿಸಿ

11:14 AM Jul 20, 2020 | Suhan S |

ಗದಗ: ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ಸಕಾರಾತ್ಮಕ ಕಂಡುಬಂದಿರುವ 24 ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳನ್ನಾಗಿ ಘೋಷಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಆದೇಶ ಹೊರಡಿಸಿದ್ದಾರೆ.

Advertisement

ಗದಗ ತಾಲೂಕು ಮುಳಗುಂದ ಪಪಂನ ಹಳೇವಾಡಾ ಓಣಿ, ಶೀತಾಲಹರಿ ಗ್ರಾಮ 1, 2, 3,4, 5, 6 ಮತ್ತು 7ರ ಪ್ರದೇಶ, ನಾಗಾವಿ ಗ್ರಾಪಂ ವಾರ್ಡ್‌ ನಂ. 2, ಚೆನ್ನಬಸಪ್ಪ ಅಜ್ಜನಮಠ ಪ್ರದೇಶ, ಹರ್ತಿ ಗ್ರಾಪಂ ವಾರ್ಡ್‌ ನಂ.1 ಕಣವಿ ಗ್ರಾಮದ ದೇಶಪಾಂಡೆ ಪ್ರದೇಶ, ಬೆಳದಡಿ ಗ್ರಾಪಂ ವಾರ್ಡ್‌ ನಂ. 5 ಕಬಲಾಯತಕಟ್ಟಿ ಗ್ರಾಮ, ನರಗುಂದ ಪುರಸಭೆ ವಾರ್ಡ್‌ ನಂ.3 ಹೊರಕೇರಿ ಓಣಿ, ವಾರ್ಡ್‌ ನಂ.7 ಕೆಂಪಗಸಿ, ವಾರ್ಡ್‌ ನಂ. 8 ಚಿನಿವಾಲಗಟ್ಟಿ ಓಣಿಯನ್ನು ಕಂಟೈನ್ಮೆಂಟ್‌ ಎಂದು ಘೋಷಿಸಲಾಗಿದೆ. ಲಕ್ಷ್ಮೇಶ್ವರ ಪುರಸಭೆ ವಾರ್ಡ್‌ ನಂ.16 ವಾಯವ್ಯ ಸಾರಿಗೆ ಡಿಪೋ ಸುತ್ತಲಿನ ಪ್ರದೇಶ, ರೋಣ ಪುರಸಭೆ ವಾರ್ಡ್‌ ನಂ.17 ಕುರುಬರ ಗಲ್ಲಿ, ಶಂಬರಚಾಳ, ಜನತಾ ಪ್ಲಾಟ್‌ ಹಾಗೂ ಗದಗ- ಬೆಟಗೇರಿ ನಗರಸಭೆ ವಾಡ್‌ ನಂ.21 ಕುಂಬಾರ ಓಣಿ, ವಾರ್ಡ್‌ ನಂ.33 ಜಾಕೀರಹುಸೇನ ಕಾಲೋನಿ, ವಾರ್ಡ್‌ ನಂ. 11 ಸವಡಿ ಪ್ಲಾಟ್ಸ್‌ ಮತ್ತು ನಿಸರ್ಗ ಬಡಾವಣೆ, ವಾರ್ಡ್‌ ನಂ. 27 ವೆಂಕಟೇಶ ಟಾಕೀಜ್‌ ಹಿಂದುಗಡೆ ಮತ್ತು ಅಣ್ಣೀಗೇರಿ ಗಾರ್ಡನ್‌ ಹತ್ತಿರದ ಪ್ರದೇಶದ ಸುತ್ತಲಿನ 100 ಮೀ. ವ್ಯಾಪ್ತಿಯನ್ನು ಪ್ರತಿಬಂ ಧಿತ ಹಾಗೂ ನಗರ ವ್ಯಾಪ್ತಿಯ ಸುತ್ತಲಿನ 5 ಕಿ.ಮೀ, ಗ್ರಾಮೀಣ ಭಾಗದ 7 ಕಿ.ಮೀ. ಪ್ರದೇಶ ಪ್ರತಿಬಂಧಿ ತವೆಂದು ಘೋಷಿಸಲಾಗಿದೆ.

9 ಪ್ರದೇಶಗಳ ನಿರ್ಬಂಧ ತೆರವು: ಸೋಂಕು ಕಂಡು ಬಂದ ಬಳಿಕ ನಿಗದಿತ ಅವಧಿಯಲ್ಲಿ ಹೊಸ ಪ್ರಕರಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ವಿವಿಧ 9 ನಿರ್ಬಂಧಿತ ಪ್ರದೇಶ ಮುಕ್ತಗೊಳಿಸಿ ಸಾಮಾನ್ಯ ವಲಯಗಳನ್ನಾಗಿ ಪರಿವರ್ತಿಸಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next