Advertisement

ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯ 23ನೇ ವಾರ್ಷಿಕ ಮಹಾಸಭೆ 

12:48 PM Aug 24, 2017 | Team Udayavani |

ಮುಂಬಯಿ: ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ಸಂಸ್ಥೆಯು ಧಾರ್ಮಿಕ ಸೇವೆಯೊಂದಿಗೆ ಸಮಾಜಪರ ಕಾರ್ಯಕ್ರಮಗಳನ್ನು ಜಾತಿ, ಭೇದವಿಲ್ಲದೆ ಮಾಡುತ್ತಿದೆ. ಪರಿಸರದ ಮಹಿಳೆಯರಿಗೆ ಹೊಲಿಗೆ ತರಬೇತಿ ತರಗತಿಯನ್ನು ನಡೆಸುತ್ತಿದ್ದು, ಪ್ರತೀ ವರ್ಷ ತರಬೇತಿ ಪ್ರಮಾಣ ಪತ್ರ ನೀಡುವುದರೊಂದಿಗೆ ಹೊಲಿಗೆ ಯಂತ್ರವೊಂದನ್ನು ನೀಡಿ ಮಹಿಳೆಯರನ್ನು ಪ್ರೋತ್ಸಾಹಿಸುವುದು ಶ್ಲಾಘನೀಯ ಎಂದು ಡೊಂಬಿವಲಿ ಪರಿಸರದ ಸಮಾಜ ಸೇವಕ ಹಾಗೂ ಹೊಟೇಲ್‌ ಉದ್ಯಮಿ ಪೇಜಾವರ ಚಿಕ್ಕಪರಾರಿ ನವೀನ್‌ ಎನ್‌. ರೈ ಅವರು ಅಭಿಪ್ರಾಯಿಸಿದರು.

Advertisement

ಆ. 20ರಂದು ಕಾಲಘೋಡ ಸಾಯಿಬಾಬಾ ಪೂಜಾ ಸಮಿತಿಯ 23ನೇ ವಾರ್ಷಿಕ ಮಹಾಸಭೆ ಹಾಗೂ ಹೊಲಿಗೆ ತರಬೇತಿ ತರಗತಿಯ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಬೊರಿವಲಿಯ ಚುಕ್ಕುವಾಡಿಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಮಾಧವ ಎಸ್‌. ಶೆಟ್ಟಿ ಅವರು ಮಾತನಾಡಿ, ಸಂಸ್ಥೆಯ ಧಾರ್ಮಿಕ ಹಾಗೂ ಸಮಾಜ ಸೇವೆಗೆ ಎಲ್ಲಾ ಸಾಯಿಭಕ್ತರು ಕೈಜೋಡಿಸಿ ಸಹಕರಿಸಬೇಕು ಎಂದು ನುಡಿದು ಆರೋಗ್ಯ ನಿಧಿಗೆ ಧನ ಸಹಾಯ ನೀಡಿದರು.

ಮುಖ್ಯ ಅತಿಥಿ ನವೀನ್‌ ಎನ್‌. ರೈ ಅವರು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಟ್ರಸ್ಟಿ ಸೀತಾರಾಮ್‌ ಎಸ್‌. ಶೆಟ್ಟಿ ಅವರು ಶಾಲು ಹೊದೆಸಿ,ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸತ್ಕರಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರೊ| ಕೇಶವ ಎಚ್‌. ಕರ್ಕೇರ ಸ್ವಾಗತಿಸಿ, ಸಂಸ್ಥೆಯ ಕಾರ್ಯಕಲಾಪಗಳ ಬಗ್ಗೆ ವಿವರಿಸಿದರು. ಕೋಶಾಧಿಕಾರಿ ರವಿ ಡಿ. ಶೇಣವ ವಂದಿಸಿದರು. ಮುಖ್ಯ ಅತಿಥಿಗಳು ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರವನ್ನಿತ್ತು ಗೌರವಿಸಿದರು.

ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಮಿಜಾರು ರಮೇಶ್‌ ಶೆಟ್ಟಿ, ಜತೆ ಕೋಶಾಧಿಕಾರಿ ಭಾಸ್ಕರ ಶೆಟ್ಟಿ, ಟ್ರಸ್ಟಿಗಳಾದ ಜಯ ಎಂ. ಶೆಟ್ಟಿ ಅತ್ತೂರು, ಜಯ ಎಸ್‌. ಶೆಟ್ಟಿ ಅಡ್ವೆ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರು, ಹೊಲಿಗೆ ತರಬೇತಿಯ ಮಹಿಳೆಯರು, ಶಿಕ್ಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ 23ನೇ ವಾರ್ಷಿಕ ಮಹಾಸಭೆಯು ನಡೆಯಿತು. ಕಾರ್ಯದರ್ಶಿ ಪ್ರೊ| ಕೇಶವ ಎಚ್‌. ಕರ್ಕೇರ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ರವಿ ಡಿ. ಶೇಣವ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಈ ವರ್ಷದ 47ನೇ ವಾರ್ಷಿಕ ಮಹಾಪೂಜೆಯನ್ನು ಅಕ್ಟೋಬರ್‌ 19ರಂದು ನಡೆಸಲು ನಿರ್ಣಯಿಸಿ, ಸರ್ವ ಸದಸ್ಯರ ಸಹಕಾರವನ್ನು ಕೊರಲಾಯಿತು. ಅಧ್ಯಕ್ಷ ಮಾಧವ ಎಸ್‌. ಶೆಟ್ಟಿ ಅವರು ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next