Advertisement
ರಾಜ್ಯದಲ್ಲಿ ಒಟ್ಟಾರೆ 314 ನಗರ/ ಪಟ್ಟಣ ಸ್ಥಳೀಯ ಸಂಸ್ಥೆಗಳಿದ್ದು, 78 ಸಂಸ್ಥೆಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ 236 ಕಡೆ ಈ ವ್ಯವಸ್ಥೆ ಅಳವಡಿಕೆಗೆ ಸುಮಾರು 18 ಸಾವಿರ ಕೋಟಿ ರೂ.ಗಳ ಆವಶ್ಯಕತೆ ಇದ್ದು, ಈ ಸಂಬಂಧ ಕೇಂದ್ರದ ಮೊರೆ ಹೋಗಿದ್ದೇವೆ ಎಂದರು.
Related Articles
ಸಾಮಾನ್ಯವಾಗಿ ಯಾವುದೇ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಮುನ್ನ ಸಂಬಂಧಪಟ್ಟ ನಗರ/ ಪಟ್ಟಣದ ನಕ್ಷೆ ಅನ್ವಯ ಮತ್ತು ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಮುಂದಿನ 25-30 ವರ್ಷಗಳಿಗೆ ಅಂದಾಜು ಲೆಕ್ಕ ಹಾಕಿ,
ಅದರ ಆಧಾರದ ಮೇಲೆ ಯೋಜನೆ ರೂಪಿಸಲಾಗುವುದು. ಆದರೆ, ರಾಜ್ಯದಲ್ಲಿ ನಗರೀಕರಣ ವೇಗವಾಗಿದ್ದು, ಜನಸಂಖ್ಯೆ ಹೆಚ್ಚಾಗುತ್ತಿದೆ. ಅದೇ ನಗರ/ ಪಟ್ಟಣಕ್ಕೆ ವಿವಿಧ ಹಂತಗಳಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಸ್ಥಳೀಯ ಜನಪ್ರತಿನಿಧಿಗಳ ಕೋರಿಕೆ ಬಂದಲ್ಲಿ ಅಂದಾಜುಪಟ್ಟಿ ತಯಾರಿಸಿ, ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
Advertisement