ಹೊಸದಿಲ್ಲಿ: 2019ರ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ( ಎನ್ ಐಎ) 13500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ದಾಳಿಗೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಬಯಲಾಗಿದ್ದು, 40 ಜನ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ದಾಳಿ ರೂಪಿಸಲು ಉಗ್ರರಿಗೆ ನೆರವಾಗಿದ್ದು ಕಾಶ್ಮೀರದ ಯುವತಿ ಎಂಬ ಮಾಹಿತಿ ವರದಿಯಾಗಿದೆ.
ಜೈಷ್ ಎ ಮೊಹಮ್ಮದ್ ಉಗ್ರರು ಈ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು ಎಂದು ಎನ್ ಐಎ ತನ್ನ ವರದಿಯಲ್ಲಿ ತಿಳಿಸಿದೆ. ಅದಲ್ಲದೆ ಕಾಶ್ಮೀರದಲ್ಲಿ ಉಗ್ರರಿಗೆ ಉಳಿದುಕೊಳ್ಳಲು ಮನೆ, ಊಟ ಮತ್ತು ವಾಹನಗಳನ್ನು ನೀಡಿ ಸಹಾಯ ಮಾಡಿದ್ದ ಉಗ್ರನ ಪ್ರೇಯಸಿ 23 ವರ್ಷದ ಇನ್ಶಾ ಜಾನ್ ಎಂಬಾಕೆಯನ್ನು ಬಂದಿಸಿದ್ದಾರೆ.
ದಾಳಿಯ ಹಿಂದಿನ ಪ್ರಮುಖ ರೂವಾರಿಗಳಾ ಉಮರ್ ಫಾರೂಖ್, ಸಮೀರ್ ದಾರ್ ಮತ್ತು ಆದಿಲ್ ಅಹಮದ್ ದಾರ್ ಗೆ ಇನ್ಶಾ ಜಾನ್ ಮತ್ತು ಆಕೆ ತಂದೆ ತಾರಿಖ್ ಪಿರ್ ಸಹಾಯ ಮಾಡಿದ್ದರು ಎನ್ನಲಾಗಿದೆ. ಉಮರ್ ಫಾರೂಖ್ ಮತ್ತುಇನ್ಶಾ ಜಾನ್ ಪರಸ್ಪರ ಪ್ರೀತಿಸುತ್ತಿದ್ದು, ಜಾನ್ ತಂದೆ ತಾರಿಖ್ ಗೆ ತಿಳಿದಿತ್ತು ಎನ್ನಲಾಗಿದೆ.
ಇವರಿಬ್ಬರು ನಡುವೆ ಸಾಮಾಜಿ ಜಾಲತಾಣಗಳಲ್ಲಿ ಬಹಳಷ್ಟು ಸಂದೇಶಗಳು ರವಾನೆಯಾಗಿತ್ತು. 2018 ರ ಎಪ್ರಿಲ್ ನಲ್ಲೇ ಉಮರ್ ಫಾರೂಖ್ ಕಾಶ್ಮೀರಕ್ಕೆ ಬಂದಿದ್ದ ಎನ್ನಲಾಗಿದೆ. ಈ ಭಾಗದಲ್ಲಿ ಯಾವ ವಾಹನಗಳು ಸಂಚರಿಸುತ್ತದೆ, ಭದ್ರತಾ ಪಡೆಗಳು ಯಾವ ಸಮಯದಲ್ಲಿ ಒಡಾಡುತ್ತಾರೆ ಎನ್ನುವ ಮಾಹಿತಿಗಳನ್ನು ಜಾನ್ ತನ್ನ ಪ್ರಿಯಕರ ಉಮರ್ ಗೆ ನೀಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ:ಹೊಸ ಟ್ವಿಸ್ಟ್: ಸುಶಾಂತ್- ರಿಯಾ ಬ್ರೇಕ್ ಅಪ್ ಮೊದಲು ಡಿಲೀಟ್ ಆಗಿತ್ತು 8 ಹಾರ್ಡ್ ಡ್ರೈವ್
ಪುಲ್ವಾಮಾ ದಾಳಿ ಹೊಣೆ ಹೊತ್ತು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ವಿಡಿಯೋ ಒಂದನ್ನು ಮಾಡಿ ಪ್ರಕಟಿಸಿತ್ತು. ಈ ವಿಡಿಯೋ ಕೂಡ ಜಾನ್ ಮನೆಯಲ್ಲೇ ರೆಕಾರ್ಡ್ ಮಾಡಲಾಗಿತ್ತು ಎಂದು ಎನ್ಐಎ ಉಲ್ಲೇಖಿಸಿದೆ.