Advertisement

ಫುಟ್‌ಬಾಲ್‌ ಶಿಬಿರಕ್ಕೆ 23 ಸದಸ್ಯರ ತಂಡ

12:08 AM Mar 15, 2023 | Team Udayavani |

ಕೋಲ್ಕತಾ: ಮೂರು ರಾಷ್ಟ್ರಗಳ ನಡುವಿನ ಫ‌ುಟ್‌ಬಾಲ್‌ ಪಂದ್ಯಾವಳಿ ಶಿಬಿರಕ್ಕಾಗಿ ಕೋಚ್‌ ಐಗರ್‌ ಸ್ಟಿಮ್ಯಾಕ್‌ 23 ಸದಸ್ಯರ ತಾತ್ಕಾ ಲಿಕ ತಂಡವನ್ನು ಪ್ರಕಟಿಸಿದ್ದಾರೆ. ಸುನೀಲ್‌ ಚೆಟ್ರಿ ಮತ್ತು ಮಾನ್ವೀರ್‌ ಸಿಂಗ್‌ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 11 ಮಂದಿ ಮೀಸಲು ಆಟಗಾರರನ್ನೂ ಹೆಸರಿಸಲಾಗಿದೆ.
ಈ ಶಿಬಿರ ಬುಧವಾರ ಕೋಲ್ಕತಾದಲ್ಲಿ ಆರಂಭವಾಗಿ 5 ದಿನಗಳ ಕಾಲ ಸಾಗಲಿದೆ. ಬಳಿಕ ಭಾರತ ತಂಡ ಮಾ. 22ರಿಂದ 28ರ ತನಕ ಇಂಫಾಲದಲ್ಲಿ ಮ್ಯಾನ್ಮಾರ್‌, ಕಿರ್ಗಿ ರಿಪಬ್ಲಿಕ್‌ ನಡುವೆ ಮೂರು ರಾಷ್ಟ್ರಗಳ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ.
23 ಆಟಗಾರರ ಪೈಕಿ 14 ಮಂದಿ ಬುಧವಾರವೇ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಬೆಂಗಳೂರು ಎಫ್ಸಿ ಮತ್ತು ಎಟಿಕೆ ಮೋಹನ್‌ ಬಗಾನ್‌ ತಂಡವನ್ನು ಪ್ರತಿನಿಧಿಸುತ್ತಿರುವ ಉಳಿದ 14 ಮಂದಿ ಐಎಸ್‌ಎಲ್‌ ಫೈನಲ್‌ ಬಳಿಕ ಮಾ. 19ರಂದು ತಂಡವನ್ನು ಕೂಡಿಕೊಳ್ಳುವರು.

Advertisement

ಫ‌ುಟ್‌ಬಾಲ್‌ ತಂಡ
ಗೋಲ್‌ಕೀಪರ್: ಗುರುಪ್ರೀತ್‌ ಸಿಂಗ್‌ ಸಂಧು, ಫ‌ುರ್ಬ ಲಾಚೆನ್‌ಪಾ, ಅರ್ಮಿಂದರ್‌ ಸಿಂಗ್‌.
ಡಿಫೆಂಡರ್: ಸಂದೇಶ್‌ ಜಿಂಗಾನ್‌, ರೋಶನ್‌ ಸಿಂಗ್‌, ಅನ್ವರ್‌ ಅಲಿ, ಆಕಾಶ್‌ ಮಿಶ್ರಾ, ಚಿಂಗ್ಲೆನ್ಸಾನ ಕೋನ್ಶಮ್‌, ರಾಹುಲ್‌ ಭೆಕೆ, ಮೆಹ್ತಾಬ್‌ ಸಿಂಗ್‌, ಗ್ಲ್ಯಾನ್‌ ಮಾರ್ಟಿನ್ಸ್‌.
ಮಿಡ್‌ಫಿಲ್ಡರ್: ಸುರೇಶ್‌ ವಾಂಗಮ್‌, ರೋಹಿತ್‌ ಕುಮಾರ್‌, ಅನಿರುದ್ಧ್ ಥಾಪ, ಬ್ರಂಡನ್‌ ಫೆರ್ನಾಂಡಿಸ್‌, ಯಾಸಿರ್‌ ಮೊಹಮ್ಮದ್‌, ರಿತ್ವಿಕ್‌
ದಾಸ್‌, ಜೀಕ್ಸನ್‌ ಸಿಂಗ್‌, ಲಾಲಿಯಂಜೂಲ ಚಾಂಗೆ, ಬಿಪಿನ್‌ ಸಿಂಗ್‌.
ಫಾರ್ವರ್ಡ್ಸ್‌: ಮಾನ್ವೀರ್‌, ಸುನೀಲ್‌ ಚೆಟ್ರಿ, ಶಿವಶಕ್ತಿ ನಾರಾಯಣ್‌.

ಮೀಸಲು ಆಟಗಾರರು
ಗೋಲ್‌ಕೀಪರ್: ವಿಶಾಲ್‌ ಕೈತ್‌, ಪ್ರಭ್‌ಸುಖನ್‌ ಗಿಲ್‌.
ಡಿಫೆಂಡರ್: ಸುಭಾಶಿಷ್‌ ಬೋಸ್‌, ಪ್ರೀತಂ ಕೋಟಲ್‌, ಆಶಿಷ್‌ ರಾಯ್‌, ನರೇಂದರ್‌ ಗಹೊÉàಟ್‌.
ಮಿಡ್‌ಫಿಲ್ಡರ್: ಲಿಸ್ಟನ್‌ ಕೊಲಾಕೊ, ನಿಖೀಲ್‌ ಪೂಜಾರಿ, ಸಾಹಲ್‌ ಅಬ್ದುಲ್‌ ಸಮದ್‌, ಎನ್‌. ಮಹೇಶ್‌ ಸಿಂಗ್‌.
ಫಾರ್ವರ್ಡ್ಸ್‌: ಇಶಾನ್‌ ಪಂಡಿತ್‌.

Advertisement

Udayavani is now on Telegram. Click here to join our channel and stay updated with the latest news.

Next